ನೋಟು ಅಮಾನ್ಯಕರಣ: ಗುಡ್ಡ ಅಗೆದು ಇಲಿ ಹಿಡಿದಿದ್ದು ಮೋದಿ ಸರ್ಕಾರದ ಸಾಧನೆ; ಭೀಮಣ್ಣ ನಾಯ್ಕ

 

ಶಿರಸಿ : ನೋಟ್ ಬ್ಯಾನ್ ಆಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇನ್ನೂ ಸಹ ಅದರಿಂದ ಜನರು ಕಷ್ಟದಲ್ಲಿ ಇದ್ದಾರೆ ಹಾಗೂ ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಅದನ್ನು ವಿರೊಧೀಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ  ನ.೮ ನ್ನು ಕರಾಳ ದಿನವನ್ನಾಗಿ ಆಚರಿಸಿ ಪ್ರತಿಭಟನೆ ನಡೆಸಿದರು. 
ಬುಧವಾರ ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಸೇರಿಕೊಂಡು ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಕರಾಳ ದಿನವನ್ನಾಗಿ ಆಚರಣೆ ಮಾಡಿ ಪ್ರತಿಭಟನೆ ನಡೆಸಿ, ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ” ಕೇಂದ್ರ‌ ಬಿಜೆಪಿ ಸರ್ಕಾರ ಜನರು ಕಂಡು ಕೇಳರಿಯದ ರೀತಿಯ ಜನ ವಿರೋಧಿ ನೀತಿಯಿಂದ ನೋಟ್‌ ಬ್ಯಾನ್ ಮಾಡಿ ಇಂದಿಗೆ ಒಂದು ವರ್ಷ ಕಳೆದಿದೆ. ಆದರೆ ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಇದರಿಂದ ಹಲವಾರು ಜನ ಪ್ರಾಣ ಕಳೆದುಕೊಳ್ಳುವಙತಾಯಿತು. ಲಕ್ಷಾಂತರ ಜನ ಬೀದಿ ಪಾಲಾದರು. ನೋಟ್ ಬ್ಯಾನ್ ಮಾಡಿದ ನಂತರ ಇರುವ ಹಣದಲ್ಲಿ ಶೆ.೯೮ ರಷ್ಟು ರಿಸರ್ವ ಬ್ಯಾಂಕ್ ಮರಳಿ ಬಂದಿದೆ. ಇದರಿಂದ ಗುಡ್ಡ ಅಗೆದು ಇಲಿ ಹಿಡಿದಂತಹ ಕೆಲಸ ಮೋದಿ ಸರ್ಕಾರ ಮಾಡಿದೆ. ದೇಶದ ಅಭಿವೃದ್ಧಿ ಮಾರಕವಾದ ಕೆಲಸ ಇದಾಗಿದೆ. ಅಲ್ಲದೇ ಇತ್ತೀಚಿಗೆ ಜಿಎಸ್ಟಿ ಯನ್ನು ಜಾರಿಗೆ ತಂದು ಜನಸಾಮಾನ್ಯರು ಬದುಕಲೂ ಆಗದ ಸ್ಥಿತಿಯನ್ನು ತರಲಾಗಿದೆ ” ಎಂದು ವಾಗ್ದಾಳಿ ನಡೆಸಿದರು. ಮೋದಿ ಸರ್ಕಾರ ಬಂದ ನಂತರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ‌. ಇದು ನಮ್ಮ ದೇಶವೋ ಬೇರೆ ದೇಶವೋ ಎನ್ನುವ ಭಾವನೆ ಜನರಲ್ಲಿ‌ ಬರುತ್ತಿದೆ ಎಂದರು
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಶಾಂತಾರಾಮ ಹೆಗಡೆ ಶಿಗೇಹಳ್ಳಿ, ವಿ.ಎಸ್.ಆರಾಧ್ಯ, ರಮೇಶ ದುಭಾಶಿ, ಸುಮಾ ಉಗ್ರಾಣಕರ,ಮೊಹಿನಿ ಬೈಲೂರು, ಅರುಣಾ ವೆರ್ಣೇಕರ, ರಾಜು ಉಗ್ರಾಣಕರ, ಜಿ.ಎನ್.ಹೆಗಡೆ  ಮುಂತಾದವರು ಭಾಗವಹಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.