ಟ್ಯಾಕ್ಸಿ ಚಾಲಕ ಮಾಲಿಕರ ಸಂಘದಿಂದ ತಹಶಿಲ್ದಾರರಿಗೆ ಮನವಿ

ಗೋಕರ್ಣ: ಮಹಾಬಲೇಶ್ವರ ಟ್ಯಾಕ್ಸಿ ಚಾಲಕರು, ಹಾಗೂ ಕುಮಟಾದ ಮಹಾಸತಿ ಚಾಲಕರು ಮತ್ತು ಮಾಲಿಕರ ಸಂಘದಿಂದ ತಹಶಿಲ್ದಾರರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನವೀನ ನಾಯ್ಕ ಮಾತನಾಡಿ ನಮ್ಮ ಜಿಲ್ಲೆಯಲ್ಲಿ 250ಕ್ಕೂ ಮೀರಿದ ಲಘು ಟ್ಯಾಕ್ಸಿಕ್ಯಾಬ್ ಚಾಲಕರು ಮಾಲಿಕರು ತಮ್ಮ ಜೀವವನ್ನು ಸಾಗಿಸುತ್ತಿದ್ದಾರೆ ತಮ್ಮ ವೃತ್ತಿ ಸಂಬಂಧಿಸಿದಂತೆ ಸಾರಿಗೆ ಉದ್ಯಮದಲ್ಲಿ ದುಡಿಯುತಲಿದ್ದು ನಮ್ಮ ರಾಜ್ಯದ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಸಾರಿಗೆ ವಾಹನಗಳಿಗೆ ಕಡ್ಡಾಯ ವೇಗ ನಿಯಂತ್ರಕ ಸಾಧನ ಅಳವಡಿಸುವ ಬಗ್ಗೆ ಸಾರಿಗೆ ಆಯುಕ್ತರಿಂದ ಆದೇಶವಾಗಿದೆ ಮೊದಲೇ ಕಷ್ಟದಲ್ಲಿರುವ ಬಡ ಸದ್ಯಸರು ಡಿಸೇಲ್ ಬೆಲೆಯಿಂದಾಗಿ ತತ್ತರಿಸಿ ಹೊಗಿದ್ದಾರೆ. ಆಟೋದವರು ಎಜೆಂಟಗಳ ಮುಖಾಂತರ ಹಣವಸೂಲಿ ಮಾಡುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ. ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ನಾವು ಮುಂದಿನ ದಿನಗಳಲ್ಲಿ ಧರಣಿಕೈಗೊಳ್ಳತ್ತೇವೆ ಎಂದರು.
ಹರಿಹರ ನಾಯ್ಕ, ಅಣ್ಣಪ್ಪ ನಾಯ್ಕ, ಕಿರಣ ಭಂಡಾರಿ, ಗಜಾನನ, ಜಗದೀಶ, ಗಣೇಶ ಮುಂತಾದವರು ಹಾಜರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.