ಶಿರಸಿಯಲ್ಲಿ ‘ಚಿಗುರು ಫೇಸ್ಬುಕ್ ಗ್ರುಪ್’ ಸಮ್ಮೇಳನ ನಾಳೆ

ಶಿರಸಿ: ಫೇಸ್‍ಬುಕ್ ಬಳಗದಿಂದ ರೂಪಿತವಾದ ಚಿಗುರು ಸಂಘಟನೆಯ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನವು ಅ.8ರಂದು ನಗರದ ಅರಣ್ಯ ಸಮುದಾಯ ಭವನದಲ್ಲಿ ನಡೆಯಲಿದೆ. ಸಮ್ಮೇಳನ ಅತಿಥಿಗಳಾಗಿ ಜೆ.ಡಿ.ಎಸ್ ಮುಖಂಡ ಶಶಿಭೂಷಣ ಹೆಗಡೆ, ಸಹಾಯಕ ಅರಣ್ಯಾಧಿಕಾರಿ ಅಶೋಕ ಭಟ್ಟ, ಸಿದ್ದಾಪುರದ ವಿಜಯ ಹೆಗಡೆ, ಕೆ.ಪಿ.ಟಿ.ಸಿ.ಎಲ್ ನಿರ್ದೇಶಕ ದೀಪಕ ಹೆಗಡೆ ದೊಡ್ಡೂರು, ಸೂರ್ಯನಾರಾಯಣ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಕುಸುಮಾಕ್ಷಿ ವೆಂಕಟ್ರಮಣ ಭಟ್ಟ ಕಲ್ಗಾರವಡ್ಡು ಇವರನ್ನು ಸನ್ಮಾನಿಸಲಾಗುತ್ತದೆ. ರಾಮಕೃಷ್ಣ ಹೆಗಡೆ ಹಿಲ್ಲೂರ ಅವರ ಗಾಯನ, ಶ್ರೀಧರ ಹೆಗಡೆ ಕಾಸರಗೋಡು ಅವರ ಅಜ್ಜಿ ಪಾತ್ರ, ಪರಮೇಶ್ವರ ಹೆಗಡೆ ಮದ್ದಳೆ, ವಿಘ್ನೇಶ್ವರ ಕೆಸರಕೊಪ್ಪ ಅವರ ಚಂಡೆ ವಾದನ ಗಮನಸೆಳೆಯಲಿದೆ. ಜೊತೆಯಲ್ಲಿ ಕೌಶಿಕ ಹೆಗಡೆಯವರ ಸ್ಪೀಡ್ ಪೇಂಟ್, ಗಣಪತಿ ಹೆಗಡೆ ಖೂರ್ಸೆಯವರ ಲೋಹ ತರಂಗ, ಪೂಜಾ ಲೋಕೆಶ್ ಭರತನಾಟ್ಯ, ಸಂಪ್ರದಾಯ ಸಂಭ್ರಮ, ಯಕ್ಷನೃತ್ಯ, ರಿಂಗ್ ಡಾನ್ಸ್, ಮಿಮಿಕ್ರಿ, ಬಾಚಣಿಕೆ ವಾದನ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನದಲ್ಲಿ ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಸಂಘಟನೆ ಪ್ರಮುಖರಾದ ನರಸಿಂಹ ಹೆಗಡೆ ಅಬ್ರಿಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.