​ಮಾದಕ ದ್ರವ್ಯದ ವಿರುದ್ಧ ಜಾಗೃತಿಗಾಗಿ ಗಾಂಧಿ ಜಯಂತಿಯಂದು ಮೌನಧರಣಿ : ಎ. ರವೀಂದ್ರ ನಾಯ್ಕ 

ಶಿರಸಿ : ಮಾದಕ ದ್ರವ್ಯ ಹಾಗೂ ಮದ್ಯಪಾನದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅ.೧ ರ ಮಧ್ಯರಾತ್ರಿ ೧೨ ರಿಂದ ಅ.೨ ರ ಮಧ್ಯಾಹ್ನ ೧೨ ಗಂಟೆಯವರೆಗೆ ಗಾಂಧಿಜಯಂತಿಯ ಪ್ರಯುಕ್ತ ಉಪವಾಸ ಮೌನಧರಣಿಯನ್ನು ನಡೆಸಲಾಗುವುದು ಎಂದು ಮದ್ಯಪಾನ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದರು.
ಗುರವಾರದಂದು ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಾಂಕೇತಿಕವಾಗಿ ಜನರಲ್ಲಿ ಜಾಗೃತಿ ಮೂಡಿಸಲು ನಡೆಸುವ ಧರಣಿಯು ಇಲ್ಲಿನ ತಹಶೀಲ್ದಾರ ಕಚೇರಿಯೆದುರು ನಡೆಯಲಿದೆ. ಅದರಲ್ಲಿ ಅ.೨ ರಂದು ೧೦.೩೦ ಕ್ಕೆ ಸಭಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ಭಾಗದ ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ಇವರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಈ ವಿಚಾರವಾಗಿ ಇಲಾಖೆಗಳು ಸಂಪೂರ್ಣ ವಿಫಲವಾಗಿದೆ. ಇದನ್ನೂ ಸಹ ನಾವು ಧರಣಿಯ ಮೂಲಕ ವಿರೋಧಿಸುತ್ತೇವೆ ಎಂದು ಅವರು ಹೇಳಿದರು.
ಈ ವೇಳೆ ಪ್ರಮುಖರಾದ ಸರೋಜಿನಿ ಭಟ್, ಕಮಲಾಕರ ನಾಯ್ಕ ಹಾಗೂ ರೇಖಾ ಗೌಡ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.