ವಿದ್ಯಾರ್ಥಿಗಳಲ್ಲಿ ಹೊಸತನ ಇರಬೇಕು: ಶಾಸಕ ಕಾಗೇರಿ

ಶಿರಸಿ : ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಬೆಳವಣಿಗೆಗೆ ಅಟಲ್ ಥಿಂಕರಿಂಗ್ ಲ್ಯಾಬ್ ಸಹಾಯವಾಗಲಿದೆ. ಉಳಿದವರಿಗೆ ಮಾದರಿಯಾಗುವಂತೆ ಇದನ್ನು ಮಾಡಿ ತೋರಿಸೋಣ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಪ್ರಾರಂಭಿಸಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ” ಅಟಲ್ ಥಿಂಕರಿಂಗ್ ಲ್ಯಾಬನ್ನು ” ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಹೊಸತನ ಇರಬೇಕು. ಪ್ರಯೋಗಾಲಯದಲ್ಲಿ ಹತ್ತಾರಿ ಸಂಗತಿಗಳನ್ನು ವಿಚಾರ ಮಾಡಲು ಅವಕಾಶವಿದೆ. ಇದು ನಮ್ಮ ಶಾಲೆಗೆ ಬಂದಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ. ಇದನ್ನು ಸರಿಯಾಗಿ ಮಾಡಿ ತೋರಿಸೋಣ. ಉಳಿದವರಿಗೆ ನಮ್ಮಿಂದ ಪ್ರೇರಣೆಯಾಗಲಿ ಎಂದರು.
2016-17 ನೇ ಸಾಲಿನಲ್ಲಿ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯ ಮೊದಲ ಸರ್ಕಾರಿ ಶಾಲೆ ಇದಾಗಿದೆ. ಇಲ್ಲಿನ ಪ್ರಯೋಗಾಲಯವು ವೃತ್ತಿಪರ ಮತ್ತು ವಯಕ್ತಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳವಲ್ಲಿ ಸಹಾಯಮಾಡುವ 21 ನೇ ಶತಮಾನದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಿದೆ. ವೈಜ್ಞಾನಿಕ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗಣಪತಿ ನಾಯ್ಕ, ಚಂದ್ರಕಾಂತ್, ಸುರೇಶ್ ಶೇಟ್, ಚಾಲಚಂದ್ರ ಭಟ್ ಮುಂತಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.