ನವರಾತ್ರಿ ಸಂಭ್ರಮಕ್ಕೆ ಹಾಸ್ಯದ ಹೂರಣ

ಬನವಾಸಿ: ಹೊಂಗಿರಣ ಫೌಂಡೇಶನ್ ವತಿಯಿಂದ ನಡೆದ ಶರನ್ನವರಾತ್ರಿಯ ಹಾಸ್ಯಸಂಜೆ ಕಾರ್ಯಕ್ರಮವು ಮಧುಕೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಹಾಸ್ಯ ಕಲಾವಿದರ ಗ್ರಾಮೀಣ ಪ್ರತಿಭೆ ಜಿ.ವಿ.ಕೊಪ್ಪಲತೋಟರವರು ಗ್ರಾಮೀಣ ಸೊಗಡಿನ, ಕುಡುಕರು, ಕೃಷಿಕರು ಹೀಗೇ ನಿತ್ಯ ಜೀವನದಲ್ಲಿ ನಡೆವ ಘಟನಾವಳಿಗಳನ್ನು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಿಶಿಷ್ಠ ವೈಖರಿಯಲ್ಲಿ ವಿನೋದಾವಳಿಗಳ ಮಿಮಿಕ್ರಿ ಮುಖೇನ ಬಿಂಬಿಸಿದರು.
ಇನ್ನೊಬ್ಬ ಕಲಾವಿದ ಯುವ ಸಂಘಟಕ ಹೆಚ್.ಗಣೇಶರವರು ತಮ್ಮ ಶಿಕ್ಷಕ ಜೀವನದಲ್ಲಿ ನಡೆದ ಸಮಸ್ಯೆಗಳು, ಮಕ್ಕಳ ಚಟುವಟಿಕೆ, ಶಾಲಾ ಸ್ಥಿತಿಗತಿ, ಸಾರ್ವಜನಿಕ ವಸ್ತು ವಿಷಯಗಳನ್ನು ವಿವಿಧ ಆಯಾಮಗಳಲ್ಲಿ ನೆರೆದ ಪ್ರೇಕ್ಷಕರೆದುರು ಹಾಸ್ಯಮಯವಾಗಿ ತೆರೆದಿಟ್ಟರು.
ಎಸ್.ಎಸ್.ಭಟ್‍ರವರು. ಉತ್ತರ ಕರ್ನಾಟಕದ ಭಾಷಾ ವೈಚಿತ್ರ್ಯವನ್ನು ಬಳಸಿಕೊಂಡು ಬ್ಯಾಂಕ್, ಆಸ್ಪತ್ರೆ, ವಾಹನಗಳಲ್ಲಿ ನಡೆವ ಸನ್ನಿವೇಶಗಳನ್ನು ಸೆರೆ ಹಿಡಿದು ತಮ್ಮ ವಿಶಿಷ್ಠ ಮಾತುಗಾರಿಕೆಯಿಂದ ನೋಡುಗರಿಗೆ ನಗುವಿನ ಟಾನಿಕ್ ನೀಡಿದವರು
ಸಮನ್ವಯಕಾರರಾಗಿ ಆಗಮಿಸಿದ ಡಾ:ಜಿ.ಎ.ಹೆಗಡೆ ಸೋಂದಾರವರ ಪ್ರೀತಿ-ಪ್ರೇಮ, ಸರಸ-ವಿರಸ, ಮದುವೆಮನೆ, ರಾಜಕೀಯ, ಗಂಡ-ಹೆಂಡತಿ ಹೀಗೇ ವಿಭಿನ್ನ ಸನಿವೇಶಗಳನ್ನೊಳಗೊಂಡÀ ಮಾತಿನ ಮೋಡಿಗೆ ಚಪ್ಪಾಳೆಗಳ ಸುರಿಮಳೆಗೈದಿದ್ದು
ವಿಶೇಷವೆನಿಸಿತ್ತು.
ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ರಾಜಶೇಖರ ಒಡೆಯರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.