ನವರಾತ್ರಿಯಲ್ಲಿ ಹಸಿರು ಕ್ರಾಂತಿಗಾಗಿ ಬಿಲ್ವಪತ್ರೆ ಸಸಿ ವಿತರಣೆ

ಬನವಾಸಿ: ಶರನ್ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಏಳನೇ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ದೇವುಳದ ಅಧ್ಯಕ್ಷ ರಾಜಶೇಖರ ಒಡೆಯರ ಅಧ್ಯಕ್ಷತೆಯಲ್ಲಿ ದಯಾನಂದ ಮಂಗಳೂರು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಕಮಿಟಿಯ ಪ್ರಧಾನ ಕಾರ್ಯದರ್ಶಿ, ಧರ್ಮದರ್ಶಿ ಡಾ. ಜಿ.ಎ. ಹೆಗಡೆ, ಸೋಂದಾ ಅವರು ಮಾತನಾಡಿ ದೇವಾಲಯ ಕಮಿಟಿಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಿಲ್ವಪತ್ರೆ ಸಸಿಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ಹಿಂಗಾರು ಮಳೆ ಚೆನ್ನಾಗಿ ಸುರಿಯುತ್ತಿರುವ ಈ ಸಂದರ್ಭದಲ್ಲಿ ಬಿಲ್ವಪತ್ರೆ ಗಿಡವನ್ನು ನೀಡುತ್ತಿದ್ದು, ಸಸ್ಯ ಸಂರಕ್ಷಣೆ, ಪರಿಸರ ವರ್ಧನೆ ಜೊತೆಗೆ ಧಾರ್ಮಿಕ ನೆಲೆಯನ್ನೂ ಗಮನದಲ್ಲಿಟ್ಟು ಈ ಕಾರ್ಯಕ್ರಮವನ್ನು ಸಮಾಜಮುಖಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಸಾಂಕೇತಿಕವಾಗಿ ಕಮಿಟಿಯ ರಾಜಶೇಖರ ಒಡೆಯರ್, ಶಿವಾನಂದ ದೀಕ್ಷಿತ್, ಡಾ. ಜಿ.ಎ ಹೆಗಡೆ ಸೊಂದಾ, ಮಂಗಲಾ ದಾವಣಗೇರಿ ಬಿಲ್ವಪತ್ರೆ ಸಸಿಗಳನ್ನು ವಿತರಿಸಿದರು.
ನಂತರ ಸಾಗರದ ವಿದ್ವಾನ್ ಜನಾರ್ಧನ ಭಟ್ಟ ನೇತೃತ್ವದ ರಾಜ್ಯ ಮಟ್ಟದ ಖ್ಯಾತ ಕಲಾತಂಡದಿಂದ ಮಯೂರಶರ್ಮನು ಪಲ್ಲವರ ದಬ್ಬಾಳಿಕೆಯನ್ನು ವಿರೋಧಿಸಿ ಗುರುವಿನ ಮಾರ್ಗದರ್ಶನದಲ್ಲಿ ಕೆಚ್ಚದೆಯ ಸೇನಾನಿಯಾಗಿ ಮಯೂರವರ್ಮನಾಗಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆಯನ್ನು ರಾಜಾಮಯೂರವರ್ಮ ನೃತ್ಯ ರೂಪಕದ ಮೂಲಕ ಪ್ರದರ್ಶಿಸಲಾಯಿತು. ಕನ್ನಡ ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.