ಇಟಗಿಯಲ್ಲಿ ಇಂದು `ಭೀಷ್ಮ ಪರ್ವ’

ಸಿದ್ದಾಪುರ: ಇಲ್ಲಿನ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನವು ಕಾರವಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶರನ್ನವರಾತ್ರಿ ಉತ್ಸವ ನಿಮಿತ್ತ ಇಟಗಿಯ ಶ್ರೀರಾಮೇಶ್ವರ ದೇವಾಲಯಲ್ಲಿ ಸೆ.28ರ ಸಂಜೆ 5:30ರಿಂದ ಭೀಷ್ಮ ಪರ್ವ ಉಚಿತ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದೆ.
ಕಾರ್ಯಕ್ರಮವನ್ನು ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಇಲಾಖೆ ನಿರ್ದೇಶಕ ರಾಮಕೃಷ್ಣ ನಾಯಕ, ಸಿದ್ದಾಪುರ ಸಿಪಿಐ ಜಯಂತ ಎಂ., ಹಿರಿಯ ಭಾಗವತ ಸತೀಶ ದಂಟಕಲ್, ಪತ್ರಕರ್ತ ರಮೇಶ ಹಾರ್ಸಿಮನೆ, ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಎಂ.ಹೆಗಡೆ, ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ ಪಾಲ್ಗೊಳ್ಳಲಿದ್ದಾರೆ.
ಬಳಿಕ ಭೀಷ್ಮ ಪರ್ವ ಯಕ್ಷಗಾನ ನಡೆಯಲಿದ್ದು, ಹಿಮ್ಮೇಳದಲ್ಲಿ ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶರತ್ ಜಾನಕೈ, ಚಂಡೆಯಲ್ಲಿ ಗಣೇಶ ಗಾಂವಕರ್ ಸಹಕಾರ ನೀಡಲಿದ್ದಾರೆ.
ಮುಮ್ಮೇಳದಲ್ಲಿ ಇದೇ ಪ್ರಥಮ ಬಾರಿಗೆ ಭೀಷ್ಮನಾಗಿ ಶಂಭು ಶಿಷ್ಯ ವಿನಾಯಕ ಹೆಗಡೆ ಕಲಗದ್ದೆ, ಕೃಷ್ಣನಾಗಿ ಅಶೋಕ ಭಟ್ಟ ಸಿದ್ದಾಪುರ, ಕೌರವನಾಗಿ ನಾಗೇಂದ್ರ ಮೂರೂರು, ಅರ್ಜುನನಾಗಿ ವೆಂಕಟೇಶ ಬೊಗ್ರಿಮಕ್ಕಿ, ಧರ್ಮರಾಯ ಹಾಗೂ ಕರ್ಣನನಾಗಿ ಅವಿನಾಶ ಕೊಪ್ಪ, ಇದೇ ಪ್ರಥಮ ಬಾರಿಗೆ ಭೀಷ್ಮ ಪರ್ವದ ಅಭಿಮನ್ಯವಾಗಿ ಕು. ತುಳಸಿ ಹೆಗಡೆ ಪಾತ್ರ ಮಾಡಲಿದ್ದಾಳೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.