ಉಪ್ಪಿಗೆ ಹಾಕಿದ ಕಾಯಿ ಕೊಳೆಯದು, ಕಾರಣ ಗೊತ್ತೆ.. ?

ಅರಿವು-ಅಚ್ಚರಿ: ಬಹಳಕಾಲದಿಂದ ಆಹಾರ ಸಂಸ್ಕರಣೆಯಲ್ಲಿ ಭಾರತೀಯರದು ಎತ್ತಿದ ಕೈ. ಮಾವಿನ ಕಾಯಿ ಅಥವಾ ಹಲಸಿನ ತೊಳೆಯನ್ನು ಉಪ್ಪಲ್ಲಿ ಶೇಖರಿಸಿಡುವ ವಿಧಾನ ನಮಗೆಲ್ಲಾ ತಿಳಿದೇ ಇದೆ. ಅದು ಹೇಗೆ ಆಹಾರವನ್ನು ಹಾಳುಮಾಡದಂತೆ ಕಾಯುತ್ತದೆ ಎಂಬುದನ್ನು ತಿಳಿಯೋಣ. ದ್ರವದ ಒಂದು ಗುಣವೆಂದರೆ, ಪ್ರಸರಣ ( osmosis) ಹೆಚ್ಚು ಸಾಂದ್ರತೆಯಿರುವ ದ್ರವವು ಕಡಿಮೆ ಸಾಂದ್ರತೆಯಿರುವ ದ್ರವದೊಂದಿಗೆ, ಮಧ್ಯ ಚರ್ಮದಂತಹ ಪರದೆ ಇದ್ದರೂಕೂಡ ಬೆರೆತುಕೊಂಡು, ಸಾಂದ್ರತೆಯನ್ನು ಸಮಗೊಳಿಸಿಕೊಳ್ಳುತ್ತದೆ. ಉಪ್ಪಿನಲ್ಲಿ ಇಟ್ಟ ಮಾವಿನಕಾಯಿಯ ಸಿಪ್ಪೆಯಮೂಲಕ ಉಪ್ಪಿನ ಅಂಶ ಮಾವಿನಕಾಯಿಯೊಳಗೆ ಹೋಗುತ್ತದೆ. ಮಾವಿನಕಾಯಿ ಉಪ್ಪಾಗುತ್ತದೆ.

ಕೊಳೆಯುವಿಕೆ ಎಂದರೆ ಕೀಟಾಣುಗಳ ಜನನ. ಉಪ್ಪಿಗೆ ಹಾಕಿದ ಮಾವಿನಕಾಯಿಯಲ್ಲಿ ಹೇಗೋ ಒಂದು ಬ್ಯಾಕ್ಟೀರಿಯಾ ಸೇರಿಕೊಂಡಿತು ಅಂದುಕೊಳ್ಳೋಣ, ತಕ್ಷಣ ಹೆಚ್ಚಿನ ಸಾಂದ್ರತೆಯಲ್ಲಿರುವ ಉಪ್ಪಿನ ಅಂಶ ಆ ಬ್ಯಾಕ್ಟೀರಿಯಾದಲ್ಲೂ ಸೇರಿಕೊಂಡು ಅದನ್ನು ಸಾಯಿಸಿಬಿಡುತ್ತದೆ. ಹೀಗೆ ಹಾಳಾಗುವುದರಿಂದ ಉಪ್ಪು ಕಾಯಿಯನ್ನು ಕಾಯುತ್ತದೆ. ಹಾಗಾದರೆ ಮಾವಿನಕಾಯಿಯನ್ನು ಸಕ್ಕರೆಯಲ್ಲಿಟ್ಟರೆ ಕೊಳೆಯುತ್ತದೆಯೋ ಇಲ್ಲವೋ? ಯೋಚಿಸಿ

Categories: ಅರಿವು-ಅಚ್ಚರಿ

Leave A Reply

Your email address will not be published.