​ಸಂಸ್ಕೃತ ಉಳಿಸಲು ಪ್ರಾಚಾರ್ಯರ ಕಾಲಿಗೆ ಎರಗಿದ ಉಪನ್ಯಾಸಕ 

ಶಿರಸಿ: ಸಂಸ್ಕೃತವನ್ನು ಉಳಿಸಿಕೊಡಿ ಎಂದು ಉಪನ್ಯಾಸಕರೊಬ್ಬರು ಪ್ರಾಚಾರ್ಯರ ಕಾಲಿಗೆ ಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಸಂಸ್ಕೃತ ಉಪನ್ಯಾಸಕ ವಿನಾಯಕ ಭಟ್ ಪ್ರಾಚಾರ್ಯ ಜನಾರ್ಧನ ಭಟ್ ಅವರ ಕಾಲಿಗೆ ಬಿದ್ದು ಸಂಸ್ಕೃತ ವಿಷಯವನ್ನು ಉಳಿಸಿ ಎಂದು ಬೇಡಿಕೊಂಡಿದ್ದಾರೆ. ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಿ ಅವಕಾಶ ನೀಡಿದರುವ ಕಾರಣ ಅವರು ಕಾಲಿಗೆ ಬಿದ್ದಾದರೂ ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಹೋದ ಸುಮಾರು ೧೫ ವಿದ್ಯಾರ್ಥಿಗಳಿಗೆ ಇಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ. ಆದ ಕಾರಣ ನೀವು ಕನ್ನಡ ಪಡೆಯಿರಿ ಎಂದು ಒತ್ತಾಯ ಪೂರ್ವಕವಾಗಿ ಕನ್ನಡ ವಿಷಯ ಆಯ್ಕೆ ಮಾಡಿಕೊಳ್ಳುವಂತೆ ಪ್ರಾಚಾರ್ಯರು ಒತ್ತಾಯಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪರೀಕ್ಷಾ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಮತ್ತೆ ವಿದ್ಯಾರ್ಥಿಗಳು ಪ್ರಾಚಾರ್ಯರ ಬಳಿ ಸಂಸ್ಕತ ನೀಡುವಂತೆ ಕೇಳಿಕೊಂಡಾಗ ಅವರು ಒಪ್ಪದಿರುವ ಕಾರಣಕ್ಕೆ ಉಪನ್ಯಾಸಕ ವಿನಾಯಕ ಭಟ್ ಅವರ ಕಾಲಿಗೆ ಬಿದ್ದು ಸಂಸ್ಕ್ರತ ಉಳಿಸುವಂತೆ ಕೇಳಿಕೊಂಡಿದ್ದಾರೆ. 

ಈ ವೇಳೆ ವಿದ್ಯಾರ್ಥಿಗಳು ತಮಗೆ ಮೊದಲಿನಿಂದಲೂ ಸಂಸ್ಕೃತ ವಿಷಯದಲ್ಲಿ ಆಸಕ್ತಿ. ಆದ ಕಾರಣ ಅದನ್ನು ಕಲಿಯಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ಸಂಸ್ಕೃತ ವಿಷಯ ಸಿಗುವಂತೆ ಮಾಡಿ ಎಂದು ಪ್ರಾಚಾರ್ಯರ ಬಳಿ ಬೇಡಿಕೊಂಡರು‌.

Categories: ಜಿಲ್ಲಾ ಸುದ್ದಿ

Leave A Reply

Your email address will not be published.