​ಇಂದಿನಿಂದ ಹುಬ್ಬಳ್ಳಿಯಲ್ಲಿ ಕೆಪಿಲ್ 

ಕ್ರೀಡೆ:  ಬೆಂಗಳೂರು ಹಾಗೂ ಮೈಸೂರಿನಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡ ಬಳಿಕ 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಹುಬ್ಬಳ್ಳಿಗೆ ಕಾಲಿಟ್ಟಿದೆ.

ಇಂದಿನಿಂದ ಈ ಆವೃತ್ತಿಯ ಕೊನೆಯ ಚರಣ ಇಲ್ಲಿನ ಕೆಎಸ್’ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಬುಧವಾರ ಕೆಎಸ್ಸಿಎ ಅಧ್ಯಕ್ಷ ಸಂಜಯ್ ದೇಸಾಯಿ ಹುಬ್ಬಳ್ಳಿ ಚರಣಕ್ಕೆ ಅಧಿಕೃತ ಚಾಲನೆ ನೀಡಿದರು. ಅಲ್ಲದೇ ಕೆಪಿಎಲ್ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ಮುಂದಿನ 10 ದಿನಗಳ ಕಾಲ ಸೆಮಿಫೈನಲ್, ಫೈನಲ್ ಸೇರಿದಂತೆ 10 ಪಂದ್ಯಗಳು ಇಲ್ಲಿ ನಡೆಯಲಿವೆ. ಈ ಹಿಂದೆಯೂ ಹುಬ್ಬಳ್ಳಿ ಕೆಪಿಎಲ್ ಹಾಗೂ ಕೆಲ ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು.

ಹುಬ್ಬಳ್ಳಿಯಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ತವರು ತಂಡ ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್ ವಿರುದ್ಧ ಇಂದು ಸಂಜೆ ಸೆಣಸಾಡಲಿದೆ.

Categories: ಜಿಲ್ಲಾ ಸುದ್ದಿ,ಸಿನಿ-ಕ್ರೀಡೆ

Leave A Reply

Your email address will not be published.