ಅಮೆರಿಕಾದಲ್ಲಿ ಶುರು ಮುಗುಳುನಗೆ ಅಬ್ಬರ 

 

ಮುಗುಳುನಗೆ’ ಸಿನಿಮಾ ಅಮೆರಿಕಾದಲ್ಲಿ ಬರೋಬ್ಬರಿ 50 ಸ್ಕ್ರೀನ್ ನಲ್ಲಿ ತೆರೆಕಾಣುತ್ತಿದೆ. ಕನ್ನಡದ ಮಟ್ಟಿಗೆ ಯುಎಸ್‌ಎನಲ್ಲಿ ಅತಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಸಹ ‘ಮುಗುಳುನಗೆ’ ಸಿನಿಮಾ ಪಾತ್ರವಾಗುತ್ತಿದೆ.
ಈ ಹಿಂದೆ ‘ರಂಗಿತರಂಗ’ ಸಿನಿಮಾ ಅತಿ ಹೆಚ್ಚು ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದ ಸಿನಿಮಾವಾಗಿತ್ತು. ಈಗ ಮುಗುಳುನಗೆ ಈ ದಾಖಲೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ.
ಸೆಪ್ಟಂಬರ್ 1 ರಂದು ಕರ್ನಾಟಕ ಹಾಗೂ ಭಾರತದಲ್ಲಿ ‘ಮುಗುಳುನಗೆ’ ಬಿಡುಗಡೆಯಾಗಿತ್ತು. ಈಗ ‘ಮುಗುಳುನಗೆ’ ಸಿನಿಮಾ ಸೆಪ್ಟಂಬರ್ 14 ರಿಂದ ಯುಎಸ್‌ಎ ಮತ್ತು ಕೆನಡಾದಲ್ಲಿ ದೇಶಗಳಲ್ಲಿ ರಿಲೀಸ್ ಆಗುತ್ತಿದೆ.
ಕೆನಡಾದ 4 ಚಿತ್ರಮಂದಿರದಲ್ಲಿ ಗಣೇಶ್ ಚಿತ್ರ ತೆರೆ ಕಾಣುತ್ತಿದೆ. ಸೈಯಾದ್ ಸಲಾಂ ಮುಗುಳು ನಗೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಗಣೇಶ್ ಜೊತೆಗೆ ಆಶಿಕಾ ರಂಗನಾಥ್ , ನಿಖಿತಾ ನಾರಾಯಣ್, ಅಪೂರ್ವ ಅರೋರ ಹಾಗೂ ಅಮೂಲ್ಯ ನಾಯಕಿಯರಾಗಿ ಅಭಿನಯಿಸಿದ್ದಾರೆ.

Categories: ಜಿಲ್ಲಾ ಸುದ್ದಿ,ಸಿನಿ-ಕ್ರೀಡೆ

Leave A Reply

Your email address will not be published.