​ಭಟ್ಟರ ‘ಮುಗುಳುನಗೆ’ ಸೆಪ್ಟೆಂಬರ್ 1ಕ್ಕೆ ಬಿಡುಗಡೆ 

ಸಿನಿ ಸುದ್ದಿ: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಮುಗುಳು ನಗೆ’ ಸೆಪ್ಟಂಬರ್ 1 ರಂದು ಭರ್ಜರಿಯಾಗಿ ತೆರೆಗೆ ಬರಲಿದೆ.

ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಈಗಾಗಲೇ ಹಾಡುಗಳು ಕಮಾಲ್ ಮಾಡುತ್ತಿವೆ. ‘ಮುಂಗಾರು ಮಳೆ’, ‘ಗಾಳಿಪಟ’ ಬಳಿಕ ಗಣೇಶ್ ಮತ್ತು ಯೋಗರಾಜ ಭಟ್ ‘ಮುಗುಳು ನಗೆ’ ಬೀರಿದ್ದಾರೆ. ಆರಂಭದಿಂದಲೂ ಬಾರೀ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರಿಸುತ್ತಿದ್ದಾರೆ.

ಈ ಮೊದಲು ಆಗಸ್ಟ್ ನಲ್ಲೇ ‘ಮುಗುಳು ನಗೆ’ ರಿಲೀಸ್ ಆಗಲಿದೆ ಎನ್ನಲಾಗಿತ್ತಾದರೂ, ಸೆಪ್ಟಂಬರ್ 1 ರಂದು ತೆರೆಗೆ ಬರಲು ಸಿದ್ಧವಾಗಿದೆ. ಅಮೂಲ್ಯ, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಆರೋರಾ ಮೊದಲಾದವರು ಅಭಿನಯಿಸಿದ್ದಾರೆ.

Categories: ಜಿಲ್ಲಾ ಸುದ್ದಿ,ಸಿನಿ-ಕ್ರೀಡೆ

Leave A Reply

Your email address will not be published.