​ಇಂದಿನಿಂದ ವಿಶ್ವಕುಸ್ತಿ – ಪದಕಗಳ ಬೇಟೆಗೆ ಭಾರತ ಸಜ್ಜು 

ಕ್ರೀಡೆ: ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಇಂದಿನಿಂದ ಆರಂಭಗೊಳ್ಳಲಿರುವ ವಿಶ್ವ ಕುಸ್ತಿ ಚಾಂಪಿಯನ್’ಶಿಪ್’ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ವಿಶ್ವ ಮಟ್ಟದಲ್ಲಿ ಛಾಪು ಮೂಡಿಸಿರುವ ಸಾಕ್ಷಿ, ಪದಕದ ಮೇಲೆ ಕಣ್ಣಿಟ್ಟಿದ್ದು 60 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

ರಿಯೋ ಗೇಮ್ಸ್’ನಲ್ಲಿ ಸಾಕ್ಷಿ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ ಮೇ ತಿಂಗಳಲ್ಲಿ ನಡೆದಿದ್ದ ಏಷ್ಯಾ ಚಾಂಪಿಯನ್’ಶಿಪ್’ನಲ್ಲಿ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಇದೇ ವೇಳೆ ಪುರುಷರ 65 ಕೆಜಿ ವಿಭಾಗದ ಏಷ್ಯಾ ಚಾಂಪಿಯನ್ ಭಜರಂಗ್ ಪೂನಿಯಾ ಸಹ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇನ್ನು ಪೊಗಟ್ ಸಹೋದರಿಯರ ಪೈಕಿ ಕೇವಲ ವಿನೇಶ್ ಪೊಗಟ್ ಮಾತ್ರ ಸ್ಪರ್ಧೆಗಿಳಿಯುತ್ತಿದ್ದಾರೆ.

Categories: ಜಿಲ್ಲಾ ಸುದ್ದಿ,ಸಿನಿ-ಕ್ರೀಡೆ

Leave A Reply

Your email address will not be published.