ಪರ್ಜನ್ಯಕ್ಕಾಗಿ ದೇವಸ್ಥಾನಕ್ಕೆ ತೆರಳಿ ಪೂಜೆಗೈದ ಸ್ವರ್ಣವಲ್ಲೀ ಸ್ವಾಮೀಜಿ


ಶಿರಸಿ: ಹಸಿರು ಜಾಗೃತಿಗೆ ಸದಾ ಕಂಕಣ ಬದ್ಧರಾಗಿರುವ ಹಸಿರು ಶ್ರೀ ಎಂದೇ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಮಳೆಗಾಗಿ ಶಿವನ ಪ್ರಾರ್ಥಿಸಿ ಹಮ್ಮಿಕೊಳ್ಳಲಾದ ಪರ್ಜನ್ಯಕ್ಕೆ ಬರಿಗಾಲ ನಡಿಗೆಯಲ್ಲಿ ತೆರಳಿ ಪೂಜೆಯಲ್ಲಿ ಪಾಲ್ಗೊಂಡರು.
ಲೋಕದಲ್ಲಿ ಮಳೆ ಸಕಾಲಕ್ಕೆ ನಿರೀಕ್ಷೆಯಷ್ಟು ಆಗದೇ ಇರುವ ಕಾರಣದಿಂದ ಚಾತುರ್ಮಾಸ್ಯ ಸಂಕಲ್ಪದಲ್ಲಿರುವ ಸ್ವರ್ಣವಲ್ಲೀ ಮಠಾಧೀಶರು ಮಠದಿಂದ ಎರಡು ಕಿಲೋಮೀಟರ್ ದೂರದ ಸೋಂದಾ ಸದಾಶಿವ ದೇವಾಲಯಕ್ಕೆ ಬರಿಗಾಲ ನಡಿಗೆ ಕೈಗೊಂಡು ಪರ್ಜನ್ಯ ಸೇವೆಯಲ್ಲಿ ಗುರುವಾರ ಪಾಲ್ಗೊಂಡರು.
ಸೋಂದಾ ಕಸಬಾ ಹಾಗೂ ತೋಟದ ಸೀಮೆಯ ಭಜಕರು ಸೇವೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.