ಕುಕ್ಕರ್’ನಲ್ಲಿ ಪದಾರ್ಥಗಳು ಬೇಗ ಬೇಯಲು ಕಾರಣ ಗೊತ್ತೇ..?

ಅರಿವು-ಅಚ್ಚರಿ: ನಾವೆಲ್ಲರು ನೋಡಿ ಅಚ್ಚರಿಪಟ್ಟ ಅಂಶ ಕುಕ್ಕರ್ ಬೇಗ ಅಡುಗೆ ಮಾಡುತ್ತದೆಂಬುದು. ಅದರ ಬಗ್ಗೆ ಚಿಕ್ಕದಾಗೊಂದು ಅರಿವು ಮೂಡಿಸಿಕೊಳ್ಳೋಣ. ನೀರಿನ ಕುದಿಯುವ ಬಿಂದು ಎಷ್ಟು ಎಂದರೆ ೧೦೦’C ಎಂಬುದು ನಮಗೆಲ್ಲಾ ತಿಳಿದಿದೆ. ಅದು ಸಹಜ ವಾತಾವರಣದ ಒತ್ತಡದಲ್ಲಿ ಮಾತ್ರ. ಒತ್ತಡ ಹೆಚ್ಚಾದರೆ ಕುದಿಯುವ ಬಿಂದು ಕೂಡ ಹೆಚ್ಚಾಗುತ್ತದೆ.

ತೆರೆದ ಪಾತ್ರೆಯಲ್ಲಿ ನೀರಿನ ಮೇಲ್ಗಡೆಯ ಒತ್ತಡ, ಸಹಜ ವಾತಾವರಣದ ಒತ್ತಡವೇ ಇರುತ್ತದೆ. ಅಂದರೆ ನೀರು ಹೆಚ್ಚೆಂದರೆ ೧೦೦’C ಅಷ್ಟು ಮಾತ್ರ ತನ್ನ ಉಷ್ಣವನ್ನು ಹೆಚ್ಚಿಸಿಕೊಳ್ಳಬಲ್ಲದು. ನೀರಿನ ಕುದಿಯುವ ಬಿಂದುವಿಗಿಂತ ಉಷ್ಣ ಹೆಚ್ಚುವುದಿಲ್ಲ. ಅಕ್ಕಿ ಅನ್ನವಾಗಲು ೨೦’C ಬೇಕು. ಆದರೆ ಕುಕ್ಕರ್‌ನಲ್ಲಿ ನೀರಾವಿ ಅಲ್ಲೇ ಶೇಖರಣೆಗೊಂಡು ಒತ್ತಡವನ್ನು ಬಹಳವೇ ಹೆಚ್ಚುಮಾಡುತ್ತದೆ. ಆಗ ನೀರಿನ ಕುದಿಯುವ ಬಿಂದು ಕೂಡ ಹೆಚ್ಚಾಗಿ ನೀರು ತನ್ನ ಉಷ್ಣವನ್ನು ೧೦೦’C ಕ್ಕಿಂತ ಹೆಚ್ಚು ಮಾಡಿಕೊಳ್ಳುತ್ತದೆ. ಆಗ ಹೆಚ್ಚಿಗೆ ತಾಪದಲ್ಲಿ ಅನ್ನ ಅಥವಾ ಅಡುಗೆ ಪದಾರ್ಥಗಳು ಬೇಗ ಬೇಯುತ್ತದೆ.

Categories: ಅರಿವು-ಅಚ್ಚರಿ

Leave A Reply

Your email address will not be published.