ಕ್ರಿಕೆಟ್; ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

ಕ್ರೀಡೆ: ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಕ್ರಿಕೆಟ್ ಟೆಸ್ಟ್ ನಲ್ಲಿ ಟಾಸ್ ಜಯಿಸಿದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಒಂದು ಟೆಸ್ಟ್ ಪಂದ್ಯಕ್ಕೆ ಅಮಾನತುಗೊಂಡಿರುವ ಆಲ್ ರೌಂಡರ್ ರವೀಂದ್ರ ಜಡೇಜ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಸ್ಥಾನ ನೀಡಲಾಗಿದೆ. ಭಾರತ ಈಗಾಗಲೇ ಮೂರು ಟೆಸ್ಟ್ ಗಳ ಸರಣಿಯಲ್ಲಿ 2 ಟೆಸ್ಟ್ ಗಳನ್ನು ಗೆದ್ದುಕೊಂಡು ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈಗ ಕ್ಲೀನ್ ಸ್ವೀಪ್ ಕಡೆಗೆ ಕಣ್ಣಿಟ್ಟಿದೆ.

Categories: ಸಿನಿ-ಕ್ರೀಡೆ

Leave A Reply

Your email address will not be published.