ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಪ್ರಚಂಡ ಕೌಶಿಕ ನಾಟಕ ಪ್ರದರ್ಶನ


ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸಿದ್ದಾಪುರದ `ರಂಗಸೌಗಂಧ’ ತಂಡದಿಂದ `ಪ್ರಚಂಡ ಕೌಶಿಕ’ವೆಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ದಿವಂಗತ ವಿ ಜಿ ಭಟ್ ಬಳಗುಳಿ ಅವರು ರಚಿಸಿದ ನಾಟಕಕ್ಕೆ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನ ನೀಡಿದ್ದು, ಶ್ರೀಪಾದ ಹೆಗಡೆ ಕೋಡನಮನೆಯವರ ವಿನ್ಯಾಸ, ರಾಜೇಂದ್ರ ಕೊಳಗಿಯವರ ಗೀತರಚನೆ ಹಾಗೂ ಸಂಗೀತ ನಿರ್ದೇಶನ, ಜೈರಾಮ ಭಟ್ಟ ಹೆಗ್ಗಾರಳ್ಳಿ ಹಾಗೂ ಶಶಿಭೂಷಣ ತಂಗಾರಮನೆ ಸಂಗೀತ ನಿರ್ವಹಣೆ ಮಾಡಿದ್ದು ಉದಯ ಪೂಜಾರ್ ಹಾಗೂ ನಾಗರಾಜ ಭಂಡಾರಿಯವರ ಬೆಳಕಿನ ವ್ಯವಸ್ಥೆಯು ನಾಟಕದ ಹಿಮ್ಮೇಳದಲ್ಲಿತ್ತು.
ರಂಗ ಮಂಟಪದಲ್ಲಿ ವಸಿಷ್ಠರಾಗಿ ಹೆಗ್ಗಾರಳ್ಳಿಯ ರಾಜಾರಾಮ ಭಟ್ಟ, ರಾಜ ಕೌಶಿಕನಾಗಿ ರಾಮ ಅಂಕೋಲೇಕರ್, ವಿಶ್ವಾಮಿತ್ರನಾಗಿ ನಾಗಪತಿ ಭಟ್ಟ ವಡ್ಡಿನಗದ್ದೆ, ನಾರದನಾಗಿ ಶ್ರೀಪಾದ ಹೆಗಡೆ ಕೋಡನಮನೆ, ತ್ರಿಶಂಕುವಾಗಿ ಗಣಪತಿ ಹೆಗಡೆ ಗುಂಜಗೋಡು, ಅರುಂಧತಿಯಾಗಿ ಜಯಶ್ರೀ ಹುಲಿಮನೆ, ಮೇನಕೆಯ ಪಾತ್ರದಲ್ಲಿ ಶುಭಾ ರಮೇಶ ಲಕ್ಕೀಜಡ್ಡಿ, ಪೋಷಕರಾಗಿ ಪೂರ್ಣಚಂದ್ರ ಹೆಗಡೆ ಹಾಗೂ ಶಮಂತ ಹೆಗಡೆ ಪಾತ್ರಕ್ಕೆ ಜೀವ ತುಂಬಿ ಜನರನ್ನು ರಂಜಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.