ಜನಪದ ಕಲೆಯ ಉಳಿವಿಗಾಗಿ ಆ.12ಕ್ಕೆ ಯಕ್ಷಗಾನ ಪ್ರದರ್ಶನ


ಶಿರಸಿ: ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆ.12ರ ಸಂಜೆ 4ಗಂಟೆಗೆ ಕಡಬಾಳ ಯಕ್ಷೋತ್ಸವ ಆಯೋಜನೆಯಲ್ಲಿ ಪ್ರಚಂಡ ಭಾರ್ಗವ, ಹರಿಭಕ್ತ ಪ್ರಹ್ಲಾದ ಹಾಗೂ ಛಲದಂಕ ಮಲ್ಲ ಎಂಬ ಪೌರಾಣಿಕ ಆಖ್ಯಾನಗಳು ಪ್ರದರ್ಶನಗೊಳ್ಳಲಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಪದ ಕಲೆ ಯಕ್ಷಗಾನದ ಉಳಿವಿಗಾಗಿ ಪೌರಾಣಿಕ ಆಖ್ಯಾನಗಳ ಸವಿಯನ್ನು ಯಕ್ಷಾಭಿಮಾನಿಗಳಿಗೆ ಉಣಬಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಕ್ಷಗಾನದ ದಿಗ್ಗಜ ಕಲಾವಿದರುಗಳಾದ ಥಂಡಿ ಶ್ರೀಪಾದ ಭಟ್ಟ, ಭಾಸ್ಕರ ಜೋಶಿ, ಗೋಪಾಲ ಆಚಾರ್, ವಿದ್ಯಾಧರ ಜಲವಳ್ಳಿ, ಶಂಕರ ಹೆಗಡೆ ನೀಲ್ಕೊಡು, ಈಶ್ವರ ನಾಯ್ಕ ಮಂಕಿ, ಪ್ರಕಾಶ ಕಿರಾಡಿ, ಕಾರ್ತಿಕ ಚಿಟ್ಟಾಣಿ, ಪ್ರಸನ್ನ ದೇವಂಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗೇಂದ್ರ ಮೂರುರು, ಮಹಾಬಲೇಶ್ವರ ಗೌಡ, ವಿಜಯ ಗಾಣಿಗ ಬೀಜಮಕ್ಕಿ, ಪ್ರಣವ ಭಟ್ಟ, ಸಂತೋಷ ಹೆಗಡೆ ಹಾಗೂ ಹಾಸ್ಯದಲ್ಲಿ ಮಹಾಬಲೇಶವರ ಭಟ್ಟ ಕ್ಯಾದಗಿ ಜನರನ್ನು ರಂಜಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಅಶ್ವಿನಿ ಕೊಡಂದಕುಳಿಯವರ ಭಾಗವತಿಯೊಂದಿಗೆ ಬಾಲಪ್ರತಿಭೆ ಅಭಿಜ್ಞಾ ರಂಗದಲ್ಲಿ ಯಕ್ಷಗಾನದ ಪದ್ಯಕ್ಕೆ ಹೆಜ್ಜೆ ಹಾಕಿಲಿದ್ದಾಳೆ.
ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ರಾಘವೇಮದ್ರ ಅಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತರುಗಳಾಗಿ, ಶಂಕರ ಭಾಗ್ವತ್, ಕಡತೋಕಾ ಸುನಿಲ್ ಭಂಡಾರಿ ಮದ್ದಳೆ ವಾದಕರಾಗಿ, ಗಣೇಶ ಗಾಂವ್ಕರ್, ಪ್ರಸನ್ನ ಭಟ್ಟ ಹೆಗ್ಗಾರು ಚಂಡೆ ವಾದಕರಾಗಿ ಪಾಲ್ಗೊಳ್ಳಲಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.