ಕಾಲೇಜು ಚುಣಾವಣೆಗೆ ಸ್ಪರ್ಧಿಸಲು ಅನುಮತಿ ನೀಡಲು ನಕಾರ-ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

ಶಿರಸಿ: ಪದವಿ ಅಂತಿಮ ವರ್ಷದ ವಿದ್ಯಾರ್ಥಿಯೋರ್ವನಿಗೆ ವಿದ್ಯಾಲಯದ ಚುಣಾವಣೆಗೆ ಸ್ಪರ್ಧಿಸಲು ಅವಕಾಶ ನೀಡದ ಹಿನ್ನಲೆಯಲ್ಲಿ, ಆತನನ್ನು ಬೆಂಬಲಿಸಿ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿದ ಘಟನೆ ನಗರದ ಎಮ್ ಇ ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದಿದೆ. ವಿಷಯದಲ್ಲಿ ಅನುತೀರ್ಣನಾಗಿರುವ ವಿದ್ಯಾರ್ಥಿಯು ಚುಣಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಪ್ರಸ್ತುತ ಸಾಲಿನಲ್ಲಿ ಏಕಾಏಕಿ ನಿರ್ಣಯ ತಂದಿರುವ ವಿದ್ಯಾಲಯದ ಕ್ರಮವನ್ನು ವಿರೋಧಿಸಿ ಕಾಲೇಜಿನ ಬಹುತೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿದ್ಯಾಲಯದ ಆವರಣದಲ್ಲಿ ಗುಂಪು ಕಟ್ಟಿಕೊಂಡು ಪ್ರತಿಭಟಿಸಿದರು. ಪರಿಣಾಮವಾಗಿ ಪ್ರಾಂಶುಪಾಲರು ಇತರ ಉಪನ್ಯಾಸಕರೊಡನೆ ದೀರ್ಘಕಾಲ ಸಮಾಲೋಚಿಸಿ ಚುಣಾವಣೆಯನ್ನು ಕೆಲವು ದಿನಕ್ಕೆ ಮುಂದೂಡಿದರು. ಜೊತೆಗೆ ಮುಂಚಿನಂತೆಯೇ ಚುಣಾವಣೆಯ ಪ್ರಕ್ರಿಯೆಗಳು ನಡೆಯಲಿವೆ ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಗತಿಗೆ ಹಿಂದಿರುಗಿದರು.

Categories: ಜಿಲ್ಲಾ ಸುದ್ದಿ

1 Comment

Leave A Reply

Your email address will not be published.