ಉಪನೊಂದಣಿ ಕಚೇರಿಯಲ್ಲಿ ಒಂದು ವಾರದಿಂದ ಇಂಟರ್ ನೆಟ್ ಸಮಸ್ಯೆ


ಭಟ್ಕಳ: ಆಸ್ತಿ, ಭೂಮಿ, ಮದುವೆ, ಮತ್ತಿತರ ನೋಂದಣೆ ಕಾರ್ಯನಿರ್ವಹಿಸುವ ಭಟ್ಕಳ ಉಪನೋಂದಣಿ ಕಚೇರಿ ಕಳೆದ ಒಂದು ವಾರದಿಂದ ನೆಟ್‍ವರ್ಕ ಸಮಸ್ಯೆ ಹೇಳಿಕೊಂಡು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಕಚೇರಿ ಮುಂಭಾಗದಲ್ಲಿ ದೊಡ್ಡದೊಂದು ಸೂಚನಾ ಫಲಕವನ್ನು ಹಾಕಿ ಕೈತೊಳೆದುಕೊಂಡಿರುವ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ. ಹಳ್ಳಿ ಪ್ರದೇಶದ ಜನರು ಸುಮಾರು 30-40 ಕಿ.ಮೀ. ದೂರದಿಂದ ತಮ್ಮ ಭೂಮಿ, ವಿವಾಹ ನೊಂದಣೆ ಮತ್ತಿತರ ಕಾರ್ಯಗಳಿಗೆ ಬಂದು ಉಪನೋಂದÀಣೆ ಕಚೇರಿ ಸುತ್ತು ಹೊಡೆದು ಹೋಗುತ್ತಿರುವುದು ಮಾಮೂಲಿಯಾಗಿದೆ.
ಈ ಕುರಿತಂತೆ ಉಪನೊಂದಾವಣಾಧಿಕಾರಿ ರಾಜೇಶ್ವರಿ ಹೆಗಡೆಯವರನ್ನು ವಿಚಾರಿಸಿದಾಗ ಕಳೆದ ಒಂದು ವಾರದಿಂದ ಇಂಟರ್ ನೆಟ್ ಸಮಸ್ಯೆ ಉಂಟಾಗಿದ್ದು ಸರ್ವರ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಇಲ್ಲಿನ ಯಾವುದೇ ಕಾರ್ಯಗಳು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ದೂರನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷವೂ ಸಹ ಇಂತಹದ್ದೇ ಸಮಸ್ಯೆ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಒಂದು ತಿಂಗಳು ಕಚೇರಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿತ್ತು. ಈ ಬಗ್ಗೆ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.