ಆ.12ಕ್ಕೆ ಗ್ರಂಥಪಾಲಕರ ದಿನಾಚರಣೆ


ಶಿರಸಿ : ಗ್ರಂಥಪಾಲಕರ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಯಲ್ಲಿ ಆ.12ರ ಸಂಜೆ 4ಕ್ಕೆ ನಡೆಯಲಿದೆ.
ಹಿರಿಯ ಸಾಹಿತಿ ಜಯರಾಮ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡುವರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ವಿ.ಪಿ.ಹೆಗಡೆ ವೈಶಾಲಿ ಅಧ್ಯಕ್ಷತೆ ವಹಿಸುವರು. ಗ್ರಂಥಾಲಯ ಶಾಖೆ ಹಾಗೂ ಸ್ಥಳೀಯ ಓದುಗರ ವೇದಿಕೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಓದುಗರ ವೇದಿಕೆಯ ಕಾರ್ಯದರ್ಶಿ ವಿರೂಪಾಕ್ಷ ಹೆಗಡೆ ಕಂಚಿಕೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.