ಅಕ್ರಮ ಗಾಂಜಾ ಮಾರಾಟ: ನಾಲ್ವರ ಬಂಧನ


ಶಿರಸಿ: ತಾಲೂಕಿನ ದಾಸನಕೊಪ್ಪ ಸಮೀಪ ಕಾಳಂಗಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ನಾಲ್ವರನ್ನು ಬನವಾಸಿ ಪೊಲೀಸರು ಬಂಧಿಸಿ 1200ರೂಪಾಯಿ ಮೌಲ್ಯದ 230ಗ್ರಾಂ ಗಾಂಜಾವನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.
ಹಾನಗಲ್‍ನ ಅರ್ಜುನ ಕಲಾಲ, ಶಿರಸಿಯ ಗಿರೀಶ ಭಜಂತ್ರಿ, ಸೂರ್ಯ ನಾರ್ವೇಕರ, ಮುಸ್ತಾಕ ಅಹಮದ್ ಅಬ್ದುಲ ರೆಹಮಾನ ಅವರನ್ನು ಬನವಾಸಿ ಪಿಎಸೈ ಮೋಹಿನಿ ಶೆಟ್ಟಿ ಅವರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.