​ಅಥ್ಲೆಟಿಕ್ಸ್ ಪರೀಕ್ಷೆ ; ನೀರಜ್ ಮತ್ತು ಕಾಂಗ್ ರ ಮೇಲೆ ನೀರೀಕ್ಷೆ


ಕ್ರೀಡೆ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಚೊಚ್ಚಲ ಪದಕದ ಕನಸು ಕಾಣುತ್ತಿರುವ ಭಾರತದ ನೀರಜ್ ಚೋಪ್ರಾ ಅವರು ಗುರುವಾರ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

ಜೂನಿಯರ್ ವಿಭಾಗದಲ್ಲಿ ವಿಶ್ವದಾಖಲೆ ಹೊಂದಿರುವ ನೀರಜ್ ಅವರು ಆಂಗ್ಲರ ನಾಡಿನಲ್ಲಿ ಮೋಡಿ ಮಾಡುವ ವಿಶ್ವಾಸ ಹೊಂದಿದ್ದಾರೆ. ಅವರು ‘ಎ’ ಗುಂಪಿನಲ್ಲಿ ಸ್ಥಾನ ಹೊಂದಿದ್ದಾರೆ. 86.48 ಮೀಟರ್ಸನ  ವೈಯಕ್ತಿಕ ದಾಖಲೆ ಹೊಂದಿರುವ ನೀರಜ್ ಅವರು ಐಎಎಎಫ್ ಕ್ರಮಾಂಕಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ ನಲ್ಲಿ  ಚಿನ್ನ ಜಯಿಸಿದ್ದ ನೀರಜ್, ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಷಿಪ್ ಗಳಲ್ಲಿ ಚಿನ್ನ ಗೆದ್ದಿರುವ ಥಾಮಸ್ ರೊಹ್ಲರ್ ಮತ್ತು ಜೊಹಾನ್ನೆಸ್ ವೆಟ್ಟರ್ ಅವರ ಸವಾಲು ಮೀರಿ ನಿಲ್ಲಬೇಕು.
ದೇವಿಂದರ್ ಸಿಂಗ್ ಕಾಂಗ್ ಅವರೂ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿಲಿದ್ದಾರೆ. ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿರುವ ಅವರು ಇಲ್ಲಿ ಫೈನಲ್ ಪ್ರವೇಶಿಸುವ ಗುರಿ ಇಟ್ಟುಕೊಂಡಿದ್ದಾರೆ.
ವಿಶ್ವ ಚಾಂಪಿಯನ್‍ಷಿಪ್ ಒಂದೇ ವಿಭಾಗದಲ್ಲಿ ಭಾರತದ ಇಬ್ಬರು ಅಥ್ಲೇಟ್ ಗಳು ಕಣಕ್ಕಿಳಿಯುತ್ತಿರುವುದು ಇದೇ ಮೊದಲು. ಹೀಗಾಗಿ ನೀರಜ್ ಮತ್ತು ಕಾಂಗ್ ಅವರ ಮೇಲೆ ಅಪಾರ ನಿರೀಕ್ಷೆ ಇದೆ.

Categories: ಸಿನಿ-ಕ್ರೀಡೆ

Leave A Reply

Your email address will not be published.