ನಕಲಿ ಗಾಂಧಿಗಳಿಂದ ಮಹಾತ್ಮ ಗಾಂಧಿ ಹೆಸರು ದುರ್ಬಳಕೆಯಾಗಿದೆ; ಶಾಸಕ ಕಾಗೇರಿ

ಶಿರಸಿ: ಸ್ವಾತಂತ್ರ್ಯ ಹೋರಾಟಗಾರರು ಕಾಂಗ್ರೆಸ್ ಪಕ್ಷದ ಆಸ್ತಿಯಲ್ಲ. ಏಕೆಂದರೆ ಅಂದು ಕಾಂಗ್ರೆಸ್ ರಾಜಕೀಯ ಪಕ್ಷವಾಗಿರಲ್ಲಿಲ್ಲ. ಜನಾಂದೋಲದ ವೇದಿಕೆಯಾಗಿ ಇದ್ದಿತ್ತು. ಆದರೆ ಇಂದು ಕಾಂಗ್ರೆಸಿಗರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪಕ್ಷದವರೆಂದು ಹೇಳಿಕೊಳ್ಳುವುದರ ಮೂಲಕ ಸಣ್ಣಬುದ್ದಿಯ ಪ್ರದರ್ಶನ ತೋರಿಸುತ್ತಿದ್ದಾರೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಕ್ವಿಟ್ ಇಂಡಿಯಾ ಚಳುವಳಿಗೆ 75 ವರ್ಷ ತುಂಬಿದ್ದರ ಹಿನ್ನಲೆಯಲ್ಲಿ ಬುಧವಾರ ನಗರದ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಸ್ವಾತಂತ್ರ್ಯಕ್ಕೆ ಹೋರಾಡಿದ ಕಾಂಗ್ರೆಸ್ ಬೇರೆ, ಈಗಿರುವ ಕಾಂಗ್ರೆಸ್ ಪಕ್ಷವೇ ಬೇರೆ. ಈಗಿನ ಸೋನಿಯಾ, ರಾಹುಲ್ ಗಾಂಧಿಯಂತ ನಕಲಿ ಗಾಂಧಿಗಳು ಮಹಾತ್ಮ ಗಾಂಧಿಯವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಾತ್ಮ ಗಾಂಧಿಗೂ, ಈಗಿನ ಗಾಂಧಿಗಳಿಗೂ ಯಾವುದೇ ಹೋಲಿಕೆ ಇಲ್ಲ ಬದಲಾಗಿ ಅಜಗಜಾಂತರ ವ್ಯತ್ಯಾಸವಿದೆ. ಇಂದು ಪ್ರಧಾನಿ ಮೋದಿ ಎಲ್ಲರೊಡನೆ ಒಡಗೂಡಿ ನವ ಭಾರತ ಕಟ್ಟಲು ಸಂಕಲ್ಪ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಜಗತ್ತಿಗೆ ಶಕ್ತಿಶಾಲಿಯಾಗಿ ದೇಶವನ್ನಾಗಿ ಹೊರಹೊಮ್ಮಿಸೋಣ ಎಂದರು. ಈ ವೇಳೆ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಜಿ ಪಂ ಸದಸ್ಯ ಆರ್ ಡಿ ಹೆಗಡೆ ಜಾನ್ಮನೆ, ಗ್ರಾಮೀಣ ಘಟಕಾಧ್ಯಕ್ಷ ರಮಾಕಾಂತ ಹೆಗಡೆ ಚಿಪಗಿ, ಜಿ ಪಂ ಸದಸ್ಯೆ ಉಷಾ ಹೆಗಡೆ, ವೀಣಾ ಶೆಟ್ಟಿ, ಪವಿತ್ರಾ ಹೊಸೂರು, ರವೀಶ ಹೆಗಡೆ, ರಿತೇಶ್.ಕೆ, ರಮಾಕಾಂತ ಭಟ್ಟ ಸೇರಿದಂತೆ ಭಾಜಪಾ ಪಕ್ಷದ ಇನ್ನಿತರರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.