ಆ.15ಕ್ಕೆ ಕೆಸರು ಗದ್ದೆ ಕ್ರೀಡಾಕೂಟ

ಯಲ್ಲಾಪುರ: ತಾಲೂಕಿನ ಭರತನಹಳ್ಳಿಯ ಗಜಾನನ ಯುವಕ ಸಂಘ ಮಾವಿನಕಟ್ಟಾ, ಶ್ರೀ ಮಾರಿಕಾಂಬಾ ಕ್ರಿಯೆಟಿವ್ಸ್ ಮಾರಿಮಕ್ಕಿ ಸೇರಿದಂತೆ ಇನ್ನಿತರ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಆ. 15 ಮಂಗಳವಾರ ಮುಂಜಾನೆ 10 ಘಂಟೆಯಿಂದ ಕೆಸರುಗದ್ದೆ ಕ್ರೀಡಾಕೂಟವನ್ನು ಮಹಮದ್ ಇಲಿಯಾಸ್ ಸಾಹೇಬ್ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಮಹಿಳೆಯರಿಗೂ ಸಹ ಕೆಸರು ಗದ್ದೆ ಓಟ ಮತ್ತು ಹಗ್ಗ ಜಗ್ಗಾಟ ಕ್ರೀಡಾಕೂಟ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾ ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಜಿ ಪಂ ಸದಸ್ಯೆ ರೂಪಾ ಭೂರ್ಮನೆ, ಶೃತಿ ಹೆಗಡೆ, ಸುಜಾತ ಸಿದ್ದಿ, ಹೇರಂಭ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.