ಸರ್ಕಾರಿ ಕಛೇರಿಯ ಗೋಡೆಮೇಲೆ ಬಿಜೆಪಿಯ ಒಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ತೋರಿಸಿ; ಭೀಮಣ್ಣ

ಶಿರಸಿ: ಯಾವುದಾದರೊಂದು ಸರ್ಕಾರಿ ಇಲಾಖೆಗಳ ಕಚೇರಿಗಳ ಗೋಡೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡು ದೇಶಕ್ಕೆಂದು ಪ್ರಾಣ ತ್ಯಾಗ ಮಾಡಿದ ಒಬ್ಬ ಬಿಜೆಪಿ ನಾಯಕನ ಪೋಟೊ ಇದ್ದರೆ ತೋರಿಸಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು. ಅವರು ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಷದ ಅಂಗವಾಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿಗರು ಜನರ ನಡುವೆ ಒಳ ಬಿರುಕುಗಳನ್ನು ಮೂಡಿಸುವ ಮೂಲಕ ಸಲ್ಲದ ರಾಜಕೀಯ ನಡೆಸುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟದ ಸಮಯದಿಂದಲೂ ಈವರೆಗೂ ಕಾಂಗ್ರೆಸ್ ಪಕ್ಷವು ಜನರಲ್ಲಿ ಸಮಾನತೆ ಕಾಣಲು ಪ್ರಯತ್ನ ನಡೆಸುತ್ತಾ ಬಂದಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಬಲಿದಾನ ಮಾಡಿದ ಅದೆಷ್ಟೋ ನಾಯಕರುಗಳನ್ನು ನೆನೆಯುವ ದಿನ ಇದಾಗಿದೆ ಎಂದರು. ಯುವ ಸಮುದಾಯಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ದೇಶಾಭಿಮಾನ ಹೆಚ್ಚಿಸುವ ಕಾರ್ಯ ಮಾಡಬೇಕು. ಪ್ರಜಾಪ್ರಭುತ್ವಕ್ಕೆ ಮಹನೀಯರ ಕೊಡುಗೆಗಳನ್ನು ನೆನೆಯುವದರೊಂದಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ಹೊರೋಣ. ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರದ ಆಸೆಯಿಂದ ಪಕ್ಷಕ್ಕಾಗಿ ದುಡಿಯುತ್ತಿಲ್ಲ. ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ಪ್ರಭಲ ಪಾತ್ರ ವಹಿಸಿದ ಪಕ್ಷ ಇದಾಗಿದ್ದರಿಂದ ಅಭಿಮಾನದಿಂದ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂದು ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಲಾಗಿತ್ತು. ಆದರೆ ಇಂದು ಬಿಜೆಪಿಗರೆ ಅಧಿಕಾರ ಬಿಟ್ಟು ತೊಲಗಿ ಎಂದು ಕರೆ ನೀಡುವ ಪರಿಸ್ಥಿತಿ ಬಂದಿದೆ. ಕೇಂದ್ರ ಸರ್ಕಾರದ ಕಾರ್ಯವೈಖರಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೋಲೆ ನಡೆಯುತ್ತಿದೆ. ತೆರಿಗೆ ಪದ್ಧತಿ ಜನರಿಗೆ ಹೆಚ್ವಿನ ತೊಂದರೆಯಾಗಲಿದೆ. ಬಿಜೆಪಿ ಮುಖಂಡರಿಂದ ತಾಲೂಕಾ ಸೇರಿದಂತೆ ರಾಜ್ಯಮಟ್ಟದಲ್ಲಿ ಸುಳ್ಳಿನ ಕಂತೆಯನ್ನೆ ನೀಡಿದೆ ಹೊರತು ಜನಪರ ಕಾರ್ಯವನ್ನಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂಬರುವ ಚುನಾವಣೆಯಲ್ಲಿ ಗೆಲುವನ್ನು ಸಾಧಿಸೋಣ ಎಂದರು. ಕೆಪಿಸಿಸಿ ಕಾರ್ಯದರ್ಶಿ ಸಿ.ಎಫ್ ನಾಯ್ಕ, ರಾಜೇಂದ್ರ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ, ಎಸ್.ಕೆ ಭಾಗವತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ದುಭಾಷಿ ಇನ್ನಿತರರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.