ಪ್ರಾಮಾಣಿಕ ಜೀವನ ನಿರ್ವಹಣೆ ದೇಶದ ಭವಿಷ್ಯಕ್ಕೆ ಕೊಡುಗೆ : ಗುರುಪ್ರಸಾದ ಹೆಗಡೆ ಹರ್ತೆಬೈಲ್

 ಶಿರಸಿ: ದೇಶಕ್ಕಾಗಿ ಎಲ್ಲರಿಗೂ ಪ್ರಾಣತ್ಯಾಗ ಮಾಡಲು ಅವಕಾಶಗಳು ಲಭ್ಯವಾಗುವದಿಲ್ಲ. ಆದರೆ ದೇಶದ ಉತ್ತಮ ಭವಿಷ್ಯಕ್ಕಾಗಿ ನಾವು ಪ್ರಾಮಾಣಿಕ ಜೀವನ ನಿರ್ವಹಣೆ ಮಾಡಿದರೆ  ಬಹುದೊಡ್ಡ ಸೇವೆ ನೀಡಿದಂತಾಗುತ್ತದೆ. ನಮ್ಮ ಹಿರಿಯರು ಶಿಕ್ಷಣ ಹಾಗೂ ಸಾಮಾಜಿಕ ಸಂಸ್ಕೃತಿಗೆ ನೀಡಿದ ಕೊಡುಗೆಗಳನ್ನು ಗಮನಿಸಿದಾಗ ಸಮಾಜದಲ್ಲಿ ಇನ್ನೂ ಅನೇಕ ಬದಲಾವಣೆಗಳು ನಡೆಯಬೇಕಿದೆ ಎಂದು ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.

ತಾಲೂಕಿನ ಆಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘವು ಮಂಗಳವಾರ  ಉದ್ಘಾಟನೆಗೂಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ದತ್ತಗುರು ಕಂಠಿ ಮಾತನಾಡಿ, ಆಡಳ್ಳಿ ಪರಿಸರವು ಸಾಂಸ್ಕೃತಿಕವಾಗಿ ಬಹಳ ಶ್ರೀಮಂತವಾಗಿದ್ದು ಎಲ್ಲಾ ರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ಈ ಭಾಗದಲ್ಲಿ ಇದ್ದಾರೆ. ಸಂಘಟನೆ ಎಂಬುದು ಸುಲಭವಾಗಿ ಸಾಧ್ಯವಿಲ್ಲ, ಸಂಘಟನಾ ಕ್ಷೇತ್ರ ಸಕ್ರೀಯವಾಗಿ ಮುಂದುವರೆಸುವುದು ಸವಾಲಿನ ಕೆಲಸ ಎಂದು ಆಶಿಸಿದರು.
ಈ ವೇಳೆ ಹಳೆಯ ವಿದ್ಯಾರ್ಥಿ ಸಂಘ ಕಾರ್ಯಕ್ರಮದಲ್ಲಿ ನಿಸರ್ಗ ಕ್ರೀಡಾ ಸಂಘ ಆಡಳ್ಳಿ ವತಿಯಿಂದ ಆಡಳ್ಳಿ ಶಾಲಾ ಶಿಕ್ಷಕರಿಗೆ ಗುರುವಂದನೆ ಹಾಗೂ ಸಂಗೀತ ಸಾಧಕ ಬಪ್ಪನಕೂಡ್ಲು ಗಂಗಾಧರ ಹೆಗಡೆಯವರನ್ನ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಭಾವತಿ ಗೌಡ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ನಾಯ್ಕ ಹಾಗೂ ಕುಸುಮಾ ಹೆಗಡೆ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.