ಕಡಲತೀರದಲ್ಲಿ ನಾಡದೋಣಿಗಳ ತಪಾಸಣಾ ಕಾರ್ಯ

ಕಾರವಾರ: ಜಿಲ್ಲೆಯ ವಿವಿಧೆಡೆಯಲ್ಲಿ ಔಟ್‍ಬೋರ್ಡ ಇಂಜಿನ್ ಮೂಲಕ ಸೀಮೆಎಣ್ಣೆ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳ ತಪಾಸಣಾ ಕಾರ್ಯ ಬುಧವಾರ ನಡೆಯಿತು. ತಪಾಸಣೆ ಆಗಿರುವ ನಾಡದೋಣಿಗಳಿಗೆ ಮಾತ್ರ ಸಪ್ಟೆಂಬರ್‍ನಿಂದ ಮೇ ತಿಂಗಳವರೆಗೆ ಸೀಮೆ ಎಣ್ಣೆ ಸಬ್ಸಿಡಿ ನೀಡಲಾಗುತ್ತದೆ. ಬ್ಯಾಂಕ್ ಪಾಸ್‍ಬುಕ್ ಹಾಗೂ ದೋಣಿ ನೋಂದಣಿ ಪತ್ರದ ನಕಲು, ಆಧಾರ್, ಎಂಜಿನ್ ನಂಬರ್ ಹಾಗೂ ದೋಣಿ ಹೆಸರು ಪರಿಶೀಲನೆ ನಡೆಯಿತು. ಇಲ್ಲಿನ ಅಲಿಗದ್ದಾ ಕಡಲ ತೀರದಲ್ಲಿ ಬೀಚ್ ಹಾಗೂ ಮಾಜಾಳಿ ಕಡಲ ತೀರದಲ್ಲಿ (ಗೋಟ್ನಿಭಾಗ), ಮುದಗಾ ಕಡಲ ತೀರ, ಅಂಕೋಲಾ ತಾಲೂಕಿನಲ್ಲಿ ಹಾರವಾಡ, ಕುಮಟಾ ತಾಲೂಕಿನ ವನಳ್ಳಿ, ತದಡಿ ಬಂದರು, ಅಳ್ವೆದಂಡೆ, ಶಸಿಹಿತ್ತಲು, ಹೊನ್ನಾವರ ತಾಲೂಕಿನ ಟೊಂಕಾ ಕಾಸರಕೋಡ, ಮಂಕಿ, ಭಟ್ಕಳದ ಮುಂಡಳ್ಳಿ ಬೆಲೆ, ತೆಂಗಿನಗುಂಡಿ ಬಂದರು, ಮುರ್ಡೇಶ್ವರ ಕಡಲ ತೀರದಲ್ಲಿ ದೋಣಿ ಪರಿಶೀಲನೆಗೆ ನಡೆಯಿತು. ದೋಣಿ, ದೋಣಿಯ ಇಂಜಿನ್ ಸುಸ್ಥಿತಿಯಲ್ಲಿದೆ ಎಂದು ಖಾತ್ರಿ ಆದ ನಂತರ ಸಬ್ಸಿಡಿ ಪಡೆಯಲು ಅನುಮತಿ ನೀಡಲಾಗುತ್ತದೆ. ಪ್ರತಿ ತಿಂಗಳು ದೋಣಿಗೆ 203 ಲೀ. ಸೀಮೆ ಎಣ್ಣೆ ನೀಡಲಾಗುತ್ತದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.