ಹಿಮಾಲಯದಂತ ಪರ್ವತಗಳು ಹೀಗೆ ರಚನೆಯಾಗುತ್ತವೆ..!

ಅರಿವು-ಅಚ್ಚರಿ: ನಾವು ಓಡಾಡುತ್ತಿರುವ ಭೂಮಿಯು, ಭೂ ಕೇಂದ್ರದ ಬಳಿ ಇರುವ ಜ್ವಾಲಾಮುಖಿಯ ಮೇಲೆ ತೇಲುತ್ತಿರುವ ದ್ವೀಪಗಳಾಗಿದ್ದವು. ಅವನ್ನು tectonic plates ಎನ್ನುತ್ತಾರೆ. ಅವು ಒಂದಕ್ಕೊಂದು ಆಕರ್ಷಿಸಿ ಸೇರಿಕೊಂಡಿದೆ. ಭೂಮಿಗಳು ಒಂದಕ್ಕೊಂದು ಹತ್ತಿರ ಬಂದಾಗ ಆಕರ್ಷಣೆ ಮತ್ತೂ ಹೆಚ್ಚಾಗಿ ಒಂದಕ್ಕೊಂದು ಒತ್ತುತ್ತಿವೆ.
ಈ ಒತ್ತುವಿಕೆಯಿಂದ ಮಧ್ಯದಲ್ಲಿ ಭೂಮಿಯು ಮೇಲೆದ್ದು ಪರ್ವತಗಳಾಗಿದೆ. (ಎರಡು ಪುಸ್ತಕವನ್ನು ಅಡ್ಡದಾಗಿ ಹಿಡಿದು ಒತ್ತಿದರೆ ಮಧ್ಯದ ಭಾಗ ಮೇಲೇಳುವುದು). ಭಾರತವು ಚೀನಾ ದೇಶದ ಪ್ರದೇಶಕ್ಕೆ ಒತ್ತಿ ಎರಡು ದೇಶಗಳ ಮಧ್ಯ ಪರ್ವತಗಳೇರ್ಪಟ್ಟಿದೆ.ಆ ಪರ್ವತಗಳು ಹೆಚ್ಚು ಎತ್ತರಕ್ಕೆ ಹೋದಂತೆ ತಾಪ ಕಡಿಮೆಯಾಗಿ ಹಿಮ ಆವರಿಸಿದೆ. ಭೂಮಿಯಿಂದ ಮೇಲೆ ಹೋದಂತೆಲ್ಲಾ ತಾಪ ಕಡಿಮೆಯಾಗುವುದು.

Categories: ಅರಿವು-ಅಚ್ಚರಿ

Leave A Reply

Your email address will not be published.