ಪ್ರೊ ಕಬಡ್ಡಿಯ ಬೆಂಗಳೂರು ಬುಲ್ಸ್ ತಂಡದಲ್ಲಿ ಜಿಲ್ಲೆಯ ಪ್ರತಿಭೆ


ಭಟ್ಕಳ: ಪ್ರೋ ಕಬಡ್ಡಿ ಲೀಗ್ ಐದರ ಋತು ಸುದೀರ್ಘ ಅವಧಿಯವರೆಗೆ ಸಾಗುತ್ತಿರುವ ಕಾರಣಕ್ಕೆ ತಂಡದಲ್ಲಿದ್ದರೂ ಕಡೆಗಣಿಸಲ್ಪಟ್ಟ ಹಲವು ಪ್ರತಿಭಾವಂತ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಲಭಿಸುವ ಸಾಧ್ಯತೆಯಿದೆ. ಭಟ್ಕಳದ 19ರ ಹರೆಯದ ಹರೀಶ್ ನಾಯ್ಕ ಅಂತಹ ಪ್ರತಿಭೆ ಇರುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕಳೆದ ಋತುವಿನಲ್ಲಿ ಬೆಂಗಳೂರು ಬುಲ್ಸ್ ಅವರನ್ನು 10 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಅವರಿನ್ನೂ ತಂಡದ ಪರ ಯಾವುದೇ ಪಂದ್ಯವನ್ನಾಡಿಲ್ಲ.
ಬಾಲ್ಯದಲ್ಲಿ ಹರೀಶ್ ಕ್ರಿಕೆಟ್ ಆಟಕ್ಕೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದರು. ಆದರೆ 10ನೇ ತರಗತಿ ವೇಳೆ ಸರ್ಪನ್ಕಟ್ಟ ಕ್ರೀಡಾ ಕ್ಲಬ್ ಸೇರಿದ ಬಳಿಕ ಕಬಡ್ಡಿ ಮತ್ತು ಖೋ ಖೋ ಆಟಕ್ಕೆ ಗಮನವಿತ್ತರು. ಯಶಸ್ವಿ ರೈಡರ್ ಆಗಿ ಕಾಣಿಸಿಕೊಂಡ ಹರೀಶ್ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದ ವೇಳೆ ಬೆಂಗಳೂರು ಬುಲ್ಸ್ ತಂಡದ ಕಣ್ಣಿಗೆ ಬಿದ್ದರು.
ಹರೀಶ್ ನಾಯ್ಕ್ ಅವರು ಇನ್ನು ದೊಡ್ಡ ಸಾಧನೆ ಮಾಡುವಂತಾಗಲಿ ಎಂಬುದೇ e-ಉತ್ತರಕನ್ನಡದ ಆಶಯವಾಗಿದೆ.

Categories: ಸಿನಿ-ಕ್ರೀಡೆ

Leave A Reply

Your email address will not be published.