Slide
Slide
Slide
previous arrow
next arrow

31 ಬಾರಿ ಟಿಪ್ಪುವನ್ನು ಸೋಲಿಸಿದವರ ವೀರಗಾಥೆಯ ವರ್ಣನೆಗಾಗಿ ಕಾಯುತ್ತಿದೆ ಇತಿಹಾಸ

300x250 AD

ಮೈಸೂರಿನ ಹುಲಿ ಎಂದು ಇತಿಹಾಸಕಾರರಿಣದ ಕರೆಯಲ್ಪಡುವ ಟಿಪ್ಪು ಸುಲ್ತಾನ್ ಭಾರತದ ಇತಿಹಾಸದ ಒಂದು ಮಹತ್ವಪೂರ್ಣ ಭಾಗ. ಆದರೆ ಹೆಚ್ಚಿನವರಿಗೆ ತಿಳಿಯದ ಸಂಗತಿ ಎಂದರೆ ಕರ್ನಾಟಕದ ಯೋಧ ಸಮುದಾಯವೊಂದು ಈ ಹುಲಿಯನ್ನು 31 ಬಾರಿ ಯುದ್ಧದಲ್ಲಿ ಸೋಲಿಸಿದೆ. ಆದರೆ ದುರಾದೃಷ್ಟವಶಾತ್ ಭಾರತದಲ್ಲಿ ವೀರಯೋಧರ ವಿಜಯಗಾಥೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಅಂತೆಯೇ ಟಿಪ್ಪುವನ್ನು ಸೋಲಿಸಿದವರ ಸಾಹಸಗಾಥೆಯನ್ನೂ ಮೂಲೆಗುಂಪು ಮಾಡಲಾಗಿದೆ.

ಆಕ್ರಮಣಕಾರಿಗಳನ್ನು ಪ್ರೀತಿಸುವ ಇತಿಹಾಸಕಾರರು ಭಾರತೀಯ ಇತಿಹಾಸದ ಪುಟಗಳನ್ನು ನಕಲಿ ಸುಲ್ತಾನಗಳನ್ನು ವೈಭವಿಕರಿಸುವುದರಲ್ಲೇ ತುಂಬಿಸಿಟ್ಟಿದ್ದಾರೆ. ಇವರ ಇತಿಹಾಸದಲ್ಲಿ ಟಿಪ್ಪುವಿನಂತಹ ಅನೇಕ ಸುಲ್ತಾನರ ಗುಣಗಾನ ಇದೆಯೇ ಹೊರತು ಭಾರತದ ನೆಲದ ವೀರರ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲ. ಅದರಲ್ಲೂ ಕೊಡವರಂತಹ ಸಾಹಸಿ ಯೋಧರು ಇದುವರೆಗೂ ಇತಿಹಾಸದ ಒಂದು ಪುಟದಲ್ಲೂ ಸ್ಥಾನವನ್ನು ಪಡೆದುಕೊಂಡಿಲ್ಲ ಎಂಬುದು ದುರಾದೃಷ್ಟವೇ ಸರಿ. ಇಂತಹ ಯೋಧರಿಗೆ ನಾವು ಗೌರವ ಕೊಡಬೇಕಾಗಿದೆ ಮತ್ತು ಶ್ರದ್ಧಾಂಜಲಿ ಸಲ್ಲಿಸಬೇಕಾಗಿದೆ.

ಕರ್ನಾಟಕದ ಅತ್ಯಂತ ಸುಂದರ ರಮಣೀಯ ತಾಣ ಕೊಡಗಿನ ಜನರು ಕೊಡುವ ಭಾಷೆ ಮಾತನಾಡುವವರು ಮತ್ತು ಪ್ರಕೃತಿ ಆರಾಧಕರು. ಸಾವಿರಾರು ವರ್ಷಗಳಿಂದ ಶಸ್ತ್ರಾಸ್ತ್ರಗಳನ್ನು ಹೊಂದಿತ್ತ ಬಂದಿರುವ ಇವರು ಇಂದಿಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸುತ್ತಾರೆ. ತಮ್ಮ ಸಂಸ್ಕೃತಿಯ ಕಾರಣದಿಂದಲೇ ಇವರಿಗೆ ಪರವಾನಗಿ ಇಲ್ಲದೆಯೂ ಗನ್ ಪ್ರದರ್ಶಿಸುವ ಅನುಮತಿ ಇದೆ. ತಮ್ಮ ಅಪ್ರತಿಮ ಸಾಹಸದ ಗುಣದಿಂದಲೇ ಕೊಡವರು ತಮಗಿಂತ ಮೂರು ಪಟ್ಟು ದೊಡ್ಡದಾದ ಟಿಪ್ಪುವಿನ ಸೇನೆಯನ್ನು 31 ಬಾರಿ ಸೋಲಿಸಿದ್ದಾರೆ. ಆದರೆ ಇತಿಹಾಸಕಾರರು ಟಿಪ್ಪುವಿನ ಶೌರ್ಯದ ಬಗ್ಗೆ ಗುಣಗಾನ ಮಾಡುತ್ತಾರೆಯೇ ಹೊರತು ಕೊಡವರ ಶೌರ್ಯದ ಬಗ್ಗೆ ಚಕಾರವೆತ್ತುವುದಿಲ್ಲ. ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ಮತ್ತು ಜನರಲ್ ಕೆ ಎಸ್ ತಿಮ್ಮಯ್ಯ ಸ್ವತಂತ್ರ ಭಾರತದಲ್ಲಿ ವೀರತ್ವ ಮತ್ತು ಶೌರ್ಯ ಪ್ರದರ್ಶಿಸಿದ ಕಾರಣಕ್ಕೆ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಇವರನ್ನು ಕೊಡಗಿನ ವೀರರ ರೂಪದಲ್ಲಿ ನೆನಪಿಸಲಾಗುತ್ತದೆ. 1947ರ ಭಾರತ-ಪಾಕಿಸ್ತಾನ ಯುದ್ಧವಿರಲಿ ಅಥವಾ 1962ರ ಭಾರತ-ಚೀನಾ ಯುದ್ಧವಿರಲಿ ಇದರಲ್ಲಿ ಕೊಡಗಿನ ಈ ವೀರರು ಅಪ್ರತಿಮ ಸಾಹಸ ತೋರಿದ್ದಾರೆ ಮತ್ತು ದೇಶಭಕ್ತಿಗೆ ಪ್ರತೀಕವಾಗಿದ್ದಾರೆ.

ಟಿಪ್ಪು ಸುಲ್ತಾನ್ ತಂದೆ ಹೈದರ್ ಅಲಿ 1765 ರಲ್ಲಿ ಮಂಗಳೂರನ್ನು ವಶಪಡಿಸುವ ಯೋಜನೆ ರೂಪಿಸುತ್ತಾನೆ ಮತ್ತು ಅತಿ ದೊಡ್ಡ ಯೋಧರ ಪಡೆಯನ್ನು ಮಂಗಳೂರಿಗೆ ಕಳುಹಿಸಿಕೊಡುತ್ತಾನೆ. ಆದರೆ ಕೊಡಗಿನ ವೀರರು ಈ ಸೇನೆಯನ್ನು ಅರಣ್ಯ ಪ್ರವೇಶಿಸುವಂತೆ ಮಾಡಿ ಅಲ್ಲಿ ಅವರ ವಿರುದ್ಧ ಹೋರಾಟ ನಡೆಸಿ ಜಯಶಾಲಿಯಾಗಿ ಸೇನೆಯನ್ನು ಹಿಮ್ಮಟ್ಟುವಂತೆ ಮಾಡುತ್ತಾರೆ. ಐದು ವರ್ಷಗಳ ಬಳಿಕ 1770ರಲ್ಲಿ ಲಿಂಗರಾಜ ಹೈದರ್‌ ಅಲಿ ಸಹಾಯದೊಂದಿಗೆ ಕೊಡಗು ಆಡಳಿತವನ್ನು ಏರಿದ. 1780 ರಲ್ಲಿ ಲಿಂಗರಾಜನ ನಿಧನದ ಬಳಿಕ ಕೊಡಗು ಆಡಳಿತಗಾರನಿಲ್ಲದೆ ಉಳಿಯಿತು. ಆತನ ಮಕ್ಕಳು ಅಪ್ರಾಪ್ತರಾದ ಕಾರಣ ಹೈದರ್‌ ಅಲಿ ಆಡಳಿತವನ್ನು ಸುಲಲಿತವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡ. ಆದರೆ ಕೊಡಗಿನ ವೀರರು ಶಾಸ್ತ್ರಾಸ್ತ್ರಗಳನ್ನು ಹಿಡಿದು ಮೈಸೂರಿನ ಸೇನೆಯನ್ನು ತಮ್ಮ ನೆಲದಿಂದ ಹೊರ ಹಾಕಿದರು. ನಂತರ 1782 ರಲ್ಲಿ ಕೊಡಗನ್ನು ಸ್ವತಂತ್ರ ಎಂದು ಘೋಷಿಸಿದರು. ಆ ವರ್ಷದ ಡಿಸೆಂಬರ್‌ನಲ್ಲಿ ಟಿಪ್ಪು ಸುಲ್ತಾನ ತನ್ನ ತಂದೆ ಹೈದರ್ ಅಲಿ ನಿಧನದ ಬಳಿಕ ಮೈಸೂರಿನ ಸಿಂಹಾಸನವನ್ನು ಏರಿದ. 1785ರಲ್ಲಿ ಟಿಪ್ಪು ಸುಲ್ತಾನ್ ಮೈಸೂರಿನಿಂದ ಕೊಡಗಿನ ಕಡೆಗೆ ತನ್ನ ಸೇನೆ ಕರೆದುಕೊಂಡು ಹೋದ. ಆದರೆ ಕೊಡಗಿನ ಯೋಧರು ಸೇನೆಯನ್ನು ಮತ್ತೊಮ್ಮೆ ಹಿಮ್ಮಟ್ಟಿಸಿದರು. ಇದರ ಬಳಿಕ ಟಿಪ್ಪು 15 ಸಾವಿರ ಯೋಧರನ್ನು ಕೊಡಗಿನ ಕಡೆಗೆ ಕಳುಹಿಸಿದ ಆದರೆ ಉಲಾಲ್ಗುಲಿ ಯುದ್ಧದಲ್ಲಿ 4000 ಕೊಡಗಿನ ಯೋಧರು ಟಿಪ್ಪುವಿನ ಸೇನೆಯನ್ನು ಸೋಲಿಸಿದರು. ಅದರ ಬಳಿಕವೂ ಕೊಡವರು ಟಿಪ್ಪು ಸುಲ್ತಾನನನ್ನು ಅನೇಕ ಬಾರಿ ಸೋಲಿಸಿದ್ದಾರೆ. ಸೋಲಿನಿಂದ ಹತಾಶನಾದ ಟಿಪ್ಪು ತಂತ್ರಗಾರಿಕೆಯನ್ನು ರೂಪಿಸಿದ ಮತ್ತು ಶಾಂತಿ ಒಪ್ಪಂದಕ್ಕಾಗಿ ಕೊಡವರನ್ನು ತಮ್ಮ ಬಳಿಗೆ ಆಹ್ವಾನಿಸಿದ. ಆದರೆ ಟಿಪ್ಪುವಿನ ಮಾತು ನಂಬಿದ ಕೊಡವರು ಭಾರೀ ಬೆಲೆಯನ್ನು ತೆರಬೇಕಾಯಿತು. ತನ್ನ ಬಲೆಗೆ ಬಿದ್ದ ಕೊಡವರನ್ನು ಟಿಪ್ಪು ಅಮಾನುಷ ರೀತಿಯಲ್ಲಿ ಹಿಂಸೆಗೆ ಒಳಪಡಿಸಿದ. ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದ ಮತ್ತು ಮಕ್ಕಳೊಂದಿಗೆ ಅವರನ್ನು ಜೈಲಿಗೆ ಹಾಕಿದ. ಇನ್ನೊಂದು ಕಡೆ ದೇಗುಲಗಳನ್ನು ದ್ವಂಸ ಮಾಡಿದ ಮತ್ತು ಗೋವಧೆ ಮಾಡುವ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ. ಬಳಿಕ ರಕ್ಷಣೆ ಇಲ್ಲದ ಕೊಡವರು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳುವ ಪರಿಸ್ಥಿತಿಗೆ ಬಂದರು. ಕೊಡವರನ್ನು ಅತ್ಯಂತ ಅಮಾನುಷವಾಗಿ ಕೊಲೆ ಮಾಡುವ ಮೂಲಕ ಟಿಪ್ಪು ಕೊಡಗನ್ನು ಇಸ್ಲಾಮಿಕರಣ ಮಾಡುವ ಹಲವು ಪ್ರಯತ್ನಗಳನ್ನು ನಡೆಸಿದ. ಆದರೆ ಕೊಡವರು ಇದಕ್ಕೆ ಆಸ್ಪದ ನೀಡಲಿಲ್ಲ, ಸೋಲು ಒಪ್ಪಿಕೊಳ್ಳಲಿಲ್ಲ. ಬದಲಾಗಿ ಅರಣ್ಯಗಳಲ್ಲಿ ಬೆಟ್ಟಗಳಲ್ಲಿ ನಿಂತು ಹೋರಾಟವನ್ನು ಮುಂದುವರಿಸಿದರು. ಟಿಪ್ಪು ಅನೇಕ ಬಾರಿ ಕೊಡವರ ಮೇಲೆ ದಾಳಿ ನಡೆಸಿದ ಆದರೆ ಕೊಡವರು ತಮ್ಮ ಮಾತೃಭೂಮಿಯನ್ನು ರಕ್ಷಣೆ ಮಾಡುವ ಸಲುವಾಗಿ ಅವಿರತ ಹೋರಾಟ ನಡೆಸಿದರು. ಹೀಗಾಗಿ ಕೊಡವರು ಮತ್ತೊಮ್ಮೆ ಮೈಸೂರಿನಿಂದ ಸ್ವತಂತ್ರ ಪಡೆದರು.

300x250 AD

ಕೊಡವ ಸಮುದಾಯವು ಟಿಪ್ಪುವಿನ ಕ್ರೂರತೆಯ ಜ್ವಾಲೆಯನ್ನು ಇಂದಿಗೂ ಕೂಡ ಜೀವಂತವಾಗಿ ಇರಿಸಿದೆ. ಕೊಡಗಿನ ದೇಗುಲದಲ್ಲಿರುವ ಸೊಂಡಿಲು ಕತ್ತರಿಸಿದ ಎರಡು ಆನೆಗಳ ಶಿಲ್ಪ ಇಂದಿಗೂ ಬಲಿಷ್ಠ ಸಂದೇಶವನ್ನು ರವಾನಿಸುತ್ತವೆ. ಇವುಗಳು ಟಿಪ್ಪುವಿನ ಕಠೋರತೆಯನ್ನು ಇಂದಿಗೂ ಪ್ರತಿಬಿಂಬಿಸುತ್ತವೆ. ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾದಾಗ ಕೊಡವ ಸಮುದಾಯವು ಇದನ್ನು ಪ್ರಬಲವಾಗಿ ವಿರೋಧಿಸಿ ಪ್ರತಿಭಟನೆಯನ್ನು ಕೂಡ ನಡೆಸಿತು. ಒಂದು ವೇಳೆ ಭಾರತದ ಪ್ರತಿ ಹಿಂದೂ ರಾಜ್ಯವು ಕೊಡವ ಸಮುದಾಯದಂತೆ ಹೋರಾಟ ನಡೆಸಿ ತಮ್ಮ ಮಾತೃಭೂಮಿಯನ್ನು ಕ್ರೂರ ಆಡಳಿತಗಾರರಿಂದ ರಕ್ಷಿಸಿಕೊಂಡಿದ್ದರೆ ಯಾವೊಬ್ಬ ಕೂಡ ಭಾರತದ ಒಂದಿಂಚು ನೆಲವನ್ನು ಅತಿಕ್ರಮಿಸುವ ಧೈರ್ಯ ಮಾಡುತ್ತಿರಲಿಲ್ಲ. ಸ್ವಾತಂತ್ರ್ಯದ ಬಳಿಕ ಸೆಕ್ಯುಲರಿಸಂ ಹೆಸರಲ್ಲಿ ನಡೆದ ಓಲೈಕೆ ಹೆಸರಿನ ದೌರ್ಜನ್ಯದ ವಿರುದ್ಧ ಬಲವಾಗಿ ಪ್ರತಿಭಟನೆ ನಡೆಯಬೇಕಿತ್ತು, ಆದರೆ ಹಾಗೆ ಆಗಲೇ ಇಲ್ಲ. ಸ್ವತಂತ್ರ ಸಿಕ್ಕು 75 ವರ್ಷಗಳ ಬಳಿಕವೂ ಭಾರತದ ಇತಿಹಾಸವು ಆಕ್ರಮಣಕಾರರ ವೈಭವೀಕರಣದಲ್ಲಿ ಮುಳುಗಿ ಹೋಯಿತು. ಭಾರತದ ವೀರಯೋಧರಿಗೆ ಭಾರತದ ಇತಿಹಾಸದಲ್ಲಿ ಒಂದಿಷ್ಟೂ ಮಾನ್ಯತೆ ಸಿಗದಂತಾಯಿತು. ಇಂದಿಗೂ ಭಾರತದ ಇತಿಹಾಸ ತನ್ನ ನಾಡಿನ ಶ್ರೇಷ್ಠ ಯೋಧರ ಶೌರ್ಯಗಾಥೆಯ ವರ್ಣನೆಗಾಗಿ ಕಾಯುತ್ತಿದೆ.

ಟಿಪ್ಪು ಸುಲ್ತಾನನ ಅಧಃಪತನಕ್ಕೆ ಪ್ರಮುಖ ಕಾರಣಕರ್ತರು ಕೊಡವ ಯೋಧರು ಎಂಬುದು ನಿಮಗೆ ತಿಳಿದಿದಿಯೇ? UNFILTERED with Sakshi ಯೂಟ್ಯೂಬ್‌ ಚಾನೆಲ್‌ನ ಈ ವಿಡಿಯೋದಲ್ಲಿ ಸಾಕ್ಷಿ ಅವರು ಕೊಡವ ಯೋಧರು, ಅವರ ಇತಿಹಾಸ ಮತ್ತು ಟಿಪ್ಪು ಸುಲ್ತಾನ್‌ ವಿರುದ್ಧದ ಹೋರಾಟದ ಕಥೆಯನ್ನು ವಿವರಿಸುತ್ತಾರೆ. ಈ ವೀರ ಯೋಧರ ಬಗ್ಗೆ ತಿಳಿಯೋಣ.

ಕೃಪೆ: http://News13.in

Share This
300x250 AD
300x250 AD
300x250 AD
Back to top