ಮೇ24 ರಂದು ಪುಟ್ಟನಮನೆಯಲ್ಲಿ ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

ಶಿರಸಿ: ಇಲ್ಲಿನ ನಾದ ಶಂಕರ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ಯಕ್ಷಗಾನ ರಂಗ ತರಬೇತಿ ಶಿಬಿರ ಸಮಾರೋಪ ಹಾಗೂ ಯಕ್ಷಗಾನ ಪ್ರದರ್ಶನ ಸಮಾರಂಭ ಮೇ.24ರ ಸಂಜೆ 6ಕ್ಕೆ ಪುಟ್ಟಣಮನೆಯ ಅಭಿನವ ರಂಗ ಮಂದಿರದಲ್ಲಿ ನಡೆಯಲಿದೆ.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಟಿ.ಎಸ್‍.ಎಸ್. ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವಹಿಸಿಕೊಳ್ಳುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್, ಉಪೇಂದ್ರ ಪೈ ಸೇವಾ ಟ್ರಸ್ಟನ ಅಧ್ಯಕ್ಷ ಉಪೇಂದ್ರ ಪೈ, ಪ್ರೋ. ಎಂ.ಎ.ಹೆಗಡೆ ದಂಟಕಲ್, ವಿ.ಉಮಾಕಾಂತ ಭಟ್ಟ ಕೆರೇಕೈ, ತಾ.ಪಂ. ಸದಸ್ಯ ರವಿ ಹೆಗಡೆ ಹಳದೋಟ, ಮಾರಿಗುಡಿ ಅಧ್ಯಕ್ಷ ವೆಂಕಟೇಶ ನಾಯ್ಕ, ಸಹಕಾರಿ ರವೀಂದ್ರ ಹೆಗಡೆ ಹೀರೇಕೈ, ಎಂ.ಎಸ್.ಜೋಶಿ, ಆರ್.ಜಿ.ಭಟ್ಟ ವರ್ಗಾಸರ, ಸತೀಶ ಎಸ್.ಶೆಟ್ಟಿ, ಸತ್ಯನಾರಾಯಣ ಭಟ್ಟ ವರ್ಗಾಸರ ಪಾಲ್ಗೊಳ್ಳಲಿದ್ದಾರೆ.
ಬಳಿಕ ಶಿಬಿರಾರ್ಥಿಗಳಿಂದ ಧರ್ಮಾಂಗದ ದಿಗ್ವಿಜಯ ಆಖ್ಯಾನ ಪ್ರದರ್ಶನ ಆಗಲಿದೆ. ಶಿಬಿರ ನಿರ್ದೇಶಕರಾದ ಮಂಜುನಾಥ ಭಟ್ಟ ಶಿರಳಗಿ, ಸತೀಶ ದಂಟಕಲ್, ಶಂಕರ ಭಾಗವತ್ ಪಾಲ್ಗೊಳ್ಳಲಿದ್ದಾರೆ. ವಿಘ್ನೇಶ್ವರ ಗೌಡ, ಗಣೇಶ ಗಾಂವಕರ್, ಪ್ರಸನ್ನ ಹೆಗ್ಗಾರ, ದಿನೇಶ ಭಟ್ಟ ಸಹಕಾರ ನೀಡಲಿದ್ದಾರೆ. ಶಿಬಿರಾರ್ಥಿಗಳಾದ ರವಿ ಶಂಕರಲಿಂಗ, ಸುಬ್ರಹ್ಮಣ್ಯ ಭಟ್ಟ ಚಂದಗುಳಿ, ಅನಿರುದ್ಧ ಬಿ., ಸತೀಶ ಭಗವತ್ ಗುಂದ, ಉಮೇಶ ಇಡಗುಂದಿ, ಸಿಂಚನಾ ನಾಯ್ಕ, ಶ್ರಾವಣಿ ಭಟ್ಟ, ಭಾವನಾ ಹೆಗಡೆ ಪ್ರಣವ್ ಭಟ್ಟ, ತೇಜಸ್ವೀ ಗಾಂವಕರ್, ನಿಧಿ ಶೆಟ್ಟಿ, ಸಂದೀಪ ಕಿಲವಳ್ಳಿ, ರವೀಶ ಕಿಲವಳ್ಳಿ, ಹರ್ಷ ಹೆಗಡೆ, ಶ್ರೀರಾಮ, ಆದಿತ್ಯ ಹೆಗಡೆ,ಸುಬ್ರಹ್ಮಣ್ಯ ಪುಟ್ಟಣಮನೆ, ಮಹಾಬಲೇಶ್ವರ ಹೆಗಡೆ ಪಾಲ್ಗೊಳ್ಳುವರು. ಸ್ಥಳೀಯ ಲಕ್ಷ್ಮೀನೃಸಿಂಹ ಯುವಕ ಮಂಡಳಿ ಹಾಗೂ ಕಿ.ಪ್ರಾ. ಶಾಲೆಯ ಸಹಕಾರದಲ್ಲಿ ಶಿಬಿರ ನಡೆಯುತ್ತಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.