ಮೇ24ರಂದು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಕಲಾವಿದರ ಸಾಕ್ಷ್ಯಚಿತ್ರ ಹಾಗೂ ಪ್ರಸಂಗಗಳ ಅನಾವರಣ

ಶಿರಸಿ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಈ ಬಾರಿ ಉ.ಕ ಜಿಲ್ಲೆಯ ಯಕ್ಷ ಕಲಾವಿದ ರಾಮಕೃಷ್ಣ ಗುಂಡಿ ಹಾಗೂ ಹೊಸ್ತೋಟ ಮಂಜುನಾಥ ಭಾಗವತರ ಕುರಿತು ಸಾಕ್ಷ್ಯ ಚಿತ್ರಗಳನ್ನು ಪ್ರೊ|| ಎಂ. ಎ. ಹೆಗಡೆ ಸಂಪಾದಿಸಿದ 2 ಪ್ರಸಂಗಗಳನ್ನು ಹೊಸ್ತೋಟರ 5 ಪ್ರಸಂಗಗಳನ್ನು ಮುದ್ರಿಸಿದೆ. 

ಈ ಎಲ್ಲಾ ದೃಶ್ಯ ಸುರುಳಿಗಳು ಹಾಗೂ ಪುಸ್ತಕಗಳ ಅನಾವರಣ ಕಾರ್ಯಕ್ರಮವು ಇದೇ ಮೇ ರಂದು ಬುಧವಾರ ಇಳಿಹೊತ್ತು 3-30 ಗಂಟೆಗೆ ಶಿರಸಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು  ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸುವರು . ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ನಾಡೋಜ ವೀರಣ್ಣ ಬೆಳಗಲ್ಲು ಅವರು ವಹಿಸುವರು.  ಹೊಸ್ತೋಟ ಮಂಜುನಾಥ ಭಾಗವತರು, ರಾಮಕೃಷ್ಣ ಗುಂದಿ ಹಾಗೂ ಪ್ರೊ|| ಎಂ.ಎ. ಹೆಗಡೆ ಮುಖ್ಯ ಅತಿಥಿಗಳಾಗಿದ್ದು, ದೃಶ್ಯ ಸುರುಳಿ ಹಾಗೂ ಪ್ರಸಂಗ ಕುರಿತು  ಎಂ. ಎನ್. ಹೆಗಡೆ ಹಳವಳ್ಳಿ,ಕಾಶ್ಯಪ ಫರ್ಣಕುಟಿ ಹಾಗೂ ಪ್ರೊ‌|| ಮೋಹನ ಹಬ್ಬು ಅಂಕೋಲಾ ಇವರು ಮಾತನಾಡುವರು. ಅಕಾಡೆಮಿ ರಜಿಸ್ಟ್ರಾರವರು ಉಪಸ್ಥಿತರಿರುವರು. ಅನಾವರಣ ಕಾರ್ಯಕ್ರಮದ ನಂತರದಲ್ಲಿ ಮಹಿಳಾ ಯಕ್ಷಗಾನದಲ್ಲಿ ಖ್ಯಾತಿಗಳಿಸಿದ ಶಿವಮೊಗ್ಗದ ಶ್ರೀಮತಿ ಕಿರಣ ಪೈ ಅವರ ತಂಡದ ಜ್ವಾಲಾ ಪ್ರತಾಪ ಯಕ್ಷಗಾನ ನಡೆಯಲಿದೆ. ಶಿರಸಿಯ ಯಕ್ಷ ಸಂಭ್ರಮ ಸಹಕಾರ ನೀಡಲಿದೆ ಎಂದು ಕ.ಯ.ಬ.ಅ.ಬೆಂಗಳೂರು ಇದರ ಸಂಚಾಲಕ ಸದಸ್ಯರಾಗಿರುವ ಶ್ರೀಮತಿ ವಿಜಯನಳಿನಿ ರಮೇಶ್ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.