ಎಸ್.ಎಸ್. ಎಲ್.ಸಿ ಮುಗಿಸಿದ ವಿದ್ಯಾರ್ಥಿಗಳಿಗೆ  ಮೇ 24 ರಂದು ವಿದ್ಯಾಪೋಷಕ ದ ಮಾಹಿತಿ ಕಾರ್ಯಾಗಾರ

ಶಿರಸಿ: ಪ್ರಸಕ್ತ ಸಾಲಿನ IIT-JEE/CET/NEET ತರಬೇತಿ ಕುರಿತ ಮಾಹಿತಿ ಕಾರ್ಯಾಗಾರವನ್ನು ವಿದ್ಯಾ ಪೋಷಕ ಸಂಸ್ಥೆಯು 24-05-2017 ರಂದು ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪ, ಶಿರಸಿ ಯಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿ ಕೊಂಡಿದೆ.ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಲು ಸಂಸ್ಥೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಛೇರಿಗೆ ಭೇಟಿ ನೀಡಬಹುದಾಗಿದೆ.
ವಿಳಾಸ: ವಿದ್ಯಾಪೋಷಕ,ವಿಕಾಸ ಬಿಲ್ಡಿಂಗ್, ಗುರುನಗರ,4ನೇ ಅಡ್ಡ ರಸ್ತೆ ಎಲ್.ಆಯ್.ಸಿ.ಕಛೇರಿ ಹಿಂಭಾಗ,ಶಿರಸಿ.

ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಫಲಿತಾಂಶಕ್ಕನುಗುಣವಾಗಿ ಶೇ.100 ರ ವರೆಗೆ ವಿದ್ಯಾರ್ಥಿ ವೇತನದ ಸೌಲಭ್ಯವಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.