ಶಿರಸಿ ಯ ಜೀವಜಲ ಕಾರ್ಯಪಡೆಗೆ ಬೆಂಗಳೂರಿನ ಖಾಸಗಿ ಕಂಪನಿಯಿಂದ ಪ್ರಶಂಸೆ

ಶಿರಸಿ:  ನಗರದ ಜೀವಜಲ ಕಾರ್ಯಪಡೆಯ ಉತ್ತಮ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿ ಬೆಂಗಳೂರಿನ ಖಾಸಗಿ ಕಂಪನಿಯು ತನ್ನ  ಸಿ.ಆರ್.ಎಸ್.ಫಂಡ್‌ ನಿಂದ ಐದು ಲಕ್ಷ ರೂಪಾಯಿ ಗಳ ಕೊಡುಗೆ ನೀಡಿದೆ.
ಜಿವ ಜಲದ ಉಳಿವಿಗೆ  ನಿರಂತರ ಶ್ರಮಿಸುತ್ತರುವ ಶಿರಸಿಯ ಜೀವಜಲ ಕಾರ್ಯಪಡೆ ಸದಾ ಕಾಲ ಮುಂದಿರುತ್ತದೆ ಎಂಬುದಕ್ಕೆ ನಿದರ್ಷನವೆಂಬಂತೆ ;ಈ ವರ್ಷದ ಮಳೆಯ ಅಭಾವದಿಂದ ಕೆರೆ ಕುಂಟೆಗಳು ಬತ್ತಿಹೋಗಿದೆ. ಇದನ್ನೇ ತಮ್ಮ ಕಾರ್ಯ ಕ್ಷಮತೆಗೆ ಸ್ಪೂರ್ತಿಯಾಗಿಸಿಕೊಂಡು ಶಿರಸಿಯ ಆನೆಹೊಂಡ,ರಾಯರಕೆರೆ ಅಲ್ಲದೇ ಸುತ್ತಮುತ್ತಲಿನ ಕೆರೆಗಳನ್ನು ಸ್ವಚ್ಛಗೊಳಿಸುವ, ಹೂಳೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿಜಕ್ಕೂ ಇಂತಹ ಉತ್ತಮ ಕೆಲಸಕ್ಕೆ ಜೀವಜಲ ಕಾರ್ಯಪಡೆಗೆ ಅಭಿನಂದನೆ ಸಲ್ಲಬೇಕು. ಅಲ್ಲದೇ ಸಾಮಾಜಿಕ ಕಳಕಳಿ ಹೊಂದಿರುವ ಸಂಘಟನೆಗೆ ಇವರು ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ  ಈ ಕಾರ್ಯವನ್ನು ಅನುಕರಿಸಿ ರಾಜ್ಯದ ಹಲವೆಡೆ ಕೆರೆ ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ.ಪಕ್ಕದ ಸಾಗರದಲ್ಲಿ ಯಲ್ಲಾಪುರದಲ್ಲಿ ಇನ್ನು ಬೇರೆ ಬೇರೆ ಕಡೆಗಳಲ್ಲಿ ವಿವಿಧ ಸಂಘಟನೆಗಳು ಈ ರೀತಿಯ ಉತ್ತಮ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದೆ. ಇವರ ಈ ಅತ್ಯುತ್ತಮ ಕಾರ್ಯವನ್ನು ಗುರುತಿಸಿ ಬೆಂಗಳೂರಿನ ಖಾಸಗಿ  ಕಂಪನಿಯೊಂದು ತನ್ನ ಸಿ.ಆರ್.ಎಸ್.ಫಂಡ್‌ ನಿಂದ  ಐದು ಲಕ್ಷ ರೂಪಾಯಿಗಳನ್ನು ನೀಡಿದೆ.ಇದರಿಂದ ಶಿರಸಿಯ ಜೀವಜಲ ಕಾರ್ಯಪಡೆ ಯ ಎಲ್ಲ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಉತ್ತಮ ಕಾರ್ಯಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುವ ಗುರುತಿಸುವ ಕಣ್ಣು ಇದ್ದೇ ಇರುತ್ತದೆ ಎನ್ನುವುದಕ್ಕೆ ನಿಜಕ್ಕೂಇದೊಂದು ತಾಜಾ ನಿದರ್ಶನ. ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳು ಇಂತಹ ಸಹಾಯ ಹಸ್ತವನ್ನು ನೀಡಿದಲ್ಲಿ ಇನ್ನಷ್ಟು ಉತ್ತಮವಾದ ಕಾರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ.ಯಾರಾದರೂ ಇಂತಹ ಉತ್ತಮವಾದ ಕೆಲಸಕ್ಕೆ ಕೈ ಜೋಡಿಸುವ ಆಸಕ್ತಿಯನ್ನು ತೋರಿಸುವವರಿದ್ದರೆ ಖಂಡಿತವಾಗಿಯೂ ಅವಕಾಶವಿದೆ. ಆಸಕ್ತಿ ಇದ್ದವರು ಜೀವಜಲ ಕಾರ್ಯಪಡೆಯನ್ನು ಸಂರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.