ಬಿಗ್ ಬಾಸ್ಕೆಟ್ ಕಂಪನಿಯಿಂದ ರೈತರ ಸಾವಯವ ಉತ್ಪನ್ನಗಳ ಖರೀದಿಸುವ ಭರವಸೆ

ಶಿರಸಿ: ದೇಶದ ಅತಿ ದೊಡ್ಡ ಆನ್‍ಲೈನ್ ಮಾರಾಟ ಸಂಸ್ಥೆಯಾದ ಬಿಗ್ ಬಾಸ್ಕೇಟ್ ಕಂಪನಿಯು ಶಿರಸಿ ತಾಲೂಕಿನ ಬಂಕನಾಳ ಗ್ರಾಮದಲ್ಲಿ ಸ್ಕೊಡ್‍ವೆಸ್ ಸಂಸ್ಥೆಯು ನಬಾರ್ಡ್ ಸಹಯೋಗದಲ್ಲಿ ರಚಿಸಿರುವ ಮಧುಕೇಶ್ವರ ಭತ್ತ ಉತ್ಪಾದಕರ ಸಹಕಾರಿ ಸಂಘದ ಮೂಲಕ ರೈತರು ಸಾವಯವ ಮಾದರಿಯಲ್ಲಿ ಬೆಳೆದ ಉತ್ಪನ್ನಗಳನ್ನು ಪರೀಕ್ಷಿಸಿ ಖರೀದಿಯ ಭರವಸೆ ನೀಡಿದೆ.

ಬಿಗ್ ಬಾಸ್ಕೇಟ್‍ನ ಮಾರುಕಟ್ಟೆ ವ್ಯವಸ್ಥಾಪಕರಾದ ರಮೇಶ ಎಂ ಅವರ ತಂಡ ರವಿ ನಾಯ್ಕ ಮತ್ತಿಹಳ್ಳಿರವರ ಜಮೀನಿಗೆ ಭೇಟಿ ನೀಡಿ ಸುಮರು 1.20 ಎಕರೆ ಪ್ರದೇಶದಲ್ಲಿ ಬೆಳೆದಿರುವ ಎರೆಸೌತೆಕಾಯಿ, ಬೆಂಡೆಕಾಯಿ, ಹೀರೆ, ಮೆಣಸು ಬೀನ್ಸ್, ಗೆಣಸು, ಬಾಳೆ, ತೊಂಡೆಕಾಯಿ ತರಕಾರಿಗಳನ್ನು ಪರಿಶೀಲಿಸಿ ಉತ್ತಮ ಗುಣಮಟ್ಟ ತರಕಾರಿಗಳ ಈ ಭಾಗದಲ್ಲಿ ಬೆಳೆಯಲಾಗುತ್ತಿದೆ ನಮ್ಮ ಕಂಪನಿಯ ಮೂಲಕ ನೇರವಾಗಿ ರೈತರಿಂದ ಖರೀದಿ ಸಂಸ್ಕರಿಸಿ ಮಾರಾಟ ಮಾಡಲು ಅವಕಾಶವಿದೆ ಎಂದರು.
ಭತ್ತ ಉತ್ಪಾದರಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪತಿ ನಾಯ್ಕ ಈ ಸಂಘದ ಮೂಲಕ ಕೈಗೊಂಡಿರುವ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುತ್ತ ದೇಸಿ ಪದ್ದತಿಯಲ್ಲಿ ಬೆಳಗಳನ್ನು ಬೆಳೆಯುವಂತೆ ರೈತರಿಗೆ ಪ್ರೇರೇಪಿಸಲಾಗಿದೆ ಎಂದರು.
ಮಧುಕೇಶ್ವರ ಭತ್ತ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸಿ.ಎಫ್.ನಾಯ್ಕ, ಗಣೇಶ ಹೆಗಡೆ, ಮರಗುಂಡಿ ಭೈರಪ್ಪ ನಾಯ್ಕ, ರವಿ ನಾಯ್ಕ ಮತ್ತಿಹಳ್ಳಿ ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.