ಸುವಿಚಾರ

​ದೈವೇ ವಿಮುಖತಾಂ ಯಾತೇ ನ ಕೋಽಪ್ಯಸ್ತಿ ಸಹಾಯವಾನ್ 

ಪಿತಾ ಮಾತಾ ತಥಾ ಭಾರ್ಯಾ ಮಿತ್ರಂ ವಾಽಥ ಸಹೋದರಃ || 

ಮುಖ್ಯವಾದ ಕೆಲಸವೊಂದನ್ನು ಮಾಡುವಾಗ ಒಂದೊಮ್ಮೆ ದೈವದ (ಅದೃಷ್ಟದ) ಸಹಾಯ ತಪ್ಪಿತೆಂದರೆ ಆಮೇಲೆ ಮಾನವ ಮಾತ್ರರಾದ ಅಪ್ಪ, ಅಮ್ಮ, ಹೆಂಡತಿ, ಅಣ್ತಮ್ಮ, ಗೆಳೆಯ – ಈ ಯಾರೂ ಸಹ ಸಹಾಯ ಮಾಡಲಾರರು. ಮಾಡಿದರೂ ಆ ಸಹಾಯ ಫಲಕಾರಿಯಾಗದು. ಕಾರ್ಯವೊಂದರ ಸಾಧನೆಗೆ ದೈವಸಹಾಯ ಬಹಳ ಮುಖ್ಯವಾದ್ದು. ಸಾಮರ್ಥ್ಯ, ಕುಶಲತೆ, ಸಾಧನಗಳು ಇವೆಲ್ಲವೂ ದೈವ ಸಹಾಯವಿಲ್ಲದ್ದಲ್ಲಿ ನಿಷ್ಪ್ರಯೋಜಕವಾದವುಗಳು. 

ಮಹಭಾರತದ ದುರ್ಯೋಧನನಿಗೆ ಆಗಿದ್ದು ಅದುವೇ ತಾನೆ? ಆತ ಅತಿಯಾಗಿ ಬಾಹ್ಯಬಲದ ಮೇಲೆ (ಟೂಲ್ಸ್, ಸಾಧನಗಳು) ನಿರ್ಭರನಾದ. ದೈವ ಸಹಾಯವನ್ನು ಕಡೆಗಣಿಸಿದ. ಹನ್ನೊಂದು ಅಕ್ಷೋಹಿಣಿಯ ಅವನ ಸೈನ್ಯವು ಪಾಂಡವರ ಏಳು ಅಕ್ಷೋಹಿಣಿಯ ಮುಂದೆ ಸರ್ವನಾಶವಾಯ್ತು.  

Categories: ಸುವಿಚಾರ

Leave A Reply

Your email address will not be published.