ವಾಚ್ ಅಂಗಡಿಗೆ ಕನ್ನ ಹಾಕಿದ ಖದೀಮರು

ಶಿರಸಿ: ನಗರದ ದೇವಿಕೆರೆ ರಸ್ತೆಯಲ್ಲಿರುವ ಸಿರಿದೇವಿ ವಾಚ್ ಸೆಂಟರ್ ಮೇಲೆ ಬುಧವಾರ ಬೆಳಗಿನ ಜಾವ ಕಳ್ಳರು ತಮ್ಮ ಕೈಚಳಕ ತೋರಿಸಿ, ಅಂಗಡಿಯಲ್ಲಿದ್ದ ಮೊಬೈಲ್ ಹಾಗು ವಾಚುಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗಿನ ಜಾವ 5.30 ರಿಂದ 5.45 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಕಳ್ಳರು ಮಂಗಳವಾರ ರಾತ್ರಿ ನಗರದ ಪ್ರತಿಷ್ಠಿತ ಹೊಟೆಲೊಂದರಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಹೊಸಪೇಟೆ ರಸ್ತೆಯ ವಿವೋ ಮೊಬೈಲ್ ಅಂಗಡಿಯಲ್ಲೂ ಸಹ ಕಳ್ಳತನದ ಪ್ರಯತ್ನ ವಿಫಲವಾಗಿದೆ. ಪೋಲೀಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.