ದೇವಿಕೆರೆ ಹೂಳೆತ್ತುವ ಕಾರ್ಯ ಯುದ್ಧೋಪಾದಿಯಲ್ಲಿ ಸಾಗುತ್ತಿದೆ; ಪ್ರದೀಪ ಶೆಟ್ಟಿ

ಶಿರಸಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ದೇವಿಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ನಗರಸಭೆಯು ಸಜ್ಜಾಗಿ ಕಾರ್ಯ ಪ್ರಗತಿಯಲ್ಲಿದ್ದು, ಕಳೆದ ಎರಡು ದಿನದಿಂದ ನೀರು ಹೊರಸಾಗಿಸುವ ಕಾರ್ಯ ಬಹುತೇಕ ಮುಗಿದಿದೆ. ಹೂಳು ತೆಗೆಯುವ ಕಾರ್ಯ ಯುದ್ಧೋಪಾದಿಯಲ್ಲಿ ಸಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಹೇಳಿದರು.

ಅವರು ಇಂದು ನಗರದ ದೇವಿಕೆರೆಯಲ್ಲಿ ಹೂಳು ತೆಗೆಯುತ್ತಿರುವ ಕಾರ್ಯದ ಕುರಿತು ಮಾತನಾಡಿ, ಶಿರಸಿಗರಿಗಾಗಿ ಅಭಿವೃದ್ಧಿ ವಿಷಯದಲ್ಲಿ ನಗರಸಭೆ ಏನನ್ನೂ ಮಾಡಲೂ ತಯಾರಿದೆ. ಹೂಳೆತ್ತುವ ಕಾರ್ಯದ ನಂತರದಲ್ಲಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಂಡು ದೇವಿಕೆರೆಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ಕೆರೆ ಒತ್ತುವರಿ ಮಾಡುವುದು ಶಿಕ್ಷಾರ್ಹ ಅಪರಾಧ. ಕೆರೆಯ ಯಾವುದೇ ಅತಿಕ್ರಮಣವನ್ನು ನಾವು ಖುಲ್ಲಾ ಪಡಿಸುತ್ತೇವೆ ಎಂದರು.
ದೇವಿಕೆರೆಯ ಹೂಳೆತ್ತುವ ಕಾರ್ಯಕ್ಕೆ ಹೆಚ್ಚು ಶ್ರಮಿಸುತ್ತಿರುವ ನಗರಸಭೆ ಸದಸ್ಯರಿಗೆ ಹಾಗು ಇಂಜಿನಿಯರ್ ಗಳಿಗೆ ಮತ್ತು ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ವೇಳೆ ಮಾತನಾಡಿದ ನಗರಸಭೆಯ ಆರೋಗ್ಯಾಧಿಕಾರಿ ಆರ್ ಎಮ್ ವರ್ಣೇಕರ್
ದೇವಿಕೆರೆಯೊಡನೆ ನಮಗೆ ಭಾವನಾತ್ಮಕ ಸಂಭಂಧವಿದ್ದು ಯಾವುದೇ ಕಾರಣಕ್ಕೂ ಹಿಡಿದಿರುವ ಕಾರ್ಯವನ್ನು ಅರ್ಧಕ್ಕೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.