ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಅರಣ್ಯ ರಕ್ಷಕ

ಶಿರಸಿ: ತಾಲೂಕಿನ ಎಕ್ಕಂಬಿ ಸಮೀಪದ ಕೊರ್ಸೆ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕನೊಬ್ಬ ಸ್ಥಳೀಯ ವ್ಯಕ್ತಿಯಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಗುರುಶಾಂತಾ ಸಂಕಣ್ಣನವರ್ ಬಂಧಿತ ಅರಣ್ಯ ರಕ್ಷಕನಾಗಿದ್ದು,  ಸ್ಥಳಿಯ ವ್ಯಕ್ತಿಯಾದ ಕೃಷ್ಣ ರಾಮ ಮರಾಠೆ ತಮ್ಮ ಮನೆಯ ಸಮೀಪ ತೆರೆದ ಬಾವಿ ತೆಗೆದಿದ್ದಕ್ಕೆ ಆಕ್ಷೇಪಿಸಿ ₹10,000 ಲಂಚವನ್ನು ನೀಡಬೇಕೆಂದು ಒತ್ತಾಯಿಸಿದ್ದ ಎನ್ನಲಾಗಿದೆ.

ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದ ಕೃಷ್ಣ ಮರಾಠೆಯು, ಇಂದು ಅರಣ್ಯ ರಕ್ಷಕನಿಗೆ ₹5,000 ಹಣವನ್ನು ಲಂಚ ನೀಡುವ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ಅರಣ್ಯ ರಕ್ಷಕನನ್ನು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.