ಭಕ್ತನ ಭಕ್ತಿ ಮತ್ತು ದೇವರ ಶಕ್ತಿ ಕೂಡಿದಾಗ ಕಾರ್ಯ ಸಾಧ್ಯ; ಮಹಾಂತ ಮಹಾಸ್ವಾಮೀಜಿ

ಶಿರಸಿ: ನಗರದ ಕೆ ಎಚ್ ಬಿ ಕಾಲೋನಿಯಲ್ಲಿರುವ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಣಹವನ, ರಾಮತಾರಕ ಹವನ, ಧರ್ಮಸಭೆ ಜಡೆಯ ಶ್ರೀ ಮಹಾಂತ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಂಗಳವಾರ ನಡೆಯಿತು.

ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ತನ್ನ ಕತೃತ್ವ ಶಕ್ತಿಯಿಂದ ಇಡಿ ನಾಡನ್ನು ಬೆಳಗಿದ ಶಕ್ತಿ ಸ್ವಾಮಿ ಹನುಮಂತನಿಗಿದೆ. ಭಕ್ತರು ತೋರುವ ಭಕ್ತಿ ಮತ್ತು ದೇವರಲ್ಲಿನ ಶಕ್ತಿ ಇವೆರಡೂ ಒಂದಾದಾಗ ಮಾತ್ರ ನಿಯೋಜಿತ ಕಾರ್ಯ ಸಾಧ್ಯವಾಗುತ್ತದೆ. ಭಗವಂತನಿಂದ ಪ್ರೇರಣೆ ನಡೆದಾಗ ಮಾತ್ರ ಅಂದುಕೊಂಡ ಕೆಲಸ ಸಾಧ್ಯವಾಗುತ್ತದೆ. ಮನುಷ್ಯ ಇರುವಷ್ಟು ದಿನವಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು. ನಿಸ್ವಾರ್ಥ ಭಾವನೆಯಿಂದ ಮಾಡುವ ಕಾರ್ಯ ಪವಿತ್ರವಾಗಿದೆ ಎಂದರು.
ತಾ ಪಂ ಉಪಾಧ್ಯಕ್ಷ ಚಂದ್ರು ಎಸಳೆ ಮಾತನಾಡಿ, ನೀರು ಗಂಗೆಯಿದ್ದಂತೆ. ನೀರಿನ ತುಟಾಗ್ರತೆಯನ್ನು ನಾವೆಲ್ಲಾ ಎದುರಿಸುತ್ತಿದ್ದೇವೆ. ನೀರಿನ ಕುರಿತಾಗಿ ಗೌರವ ಭಾವನೆ ನಮ್ಮಿಂದ ಹೊರಡಬೇಕಿದೆ. ನೀರಿನ ಸಂರಕ್ಷಣೆ ನಮಗೆಲ್ಲರಿಗೂ ಅತ್ಯಾವಶ್ಯಕವಾಗಿದೆ ಎಂದರು.
ನಗರಸಭಾ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿ, ದೇವಾಲಯಕ್ಕೆ ನಗರಸಭೆ ವತಿಯಿಂದ ಕಂಪೌಂಡ್ ಹಾಕಿಸಿಕೊಡುವ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಪೂರ್ಣಗೊಳಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಹಾಗು ದಾನಿಗಳಿಗೆ ಸನ್ಮಾನಿಸಲಾಯಿತು.
ಈ ವೇಳೆ ದೇವಾಲಯದ ಸಮಿತಿಯ ಅಧ್ಯಕ್ಷ ಮಂಜುನಾಥ ನಾಯ್ಕ ವಿಶ್ವನಾಥ ಕುಲಕರ್ಣಿ, ಜ್ಯೋತಿ  ಗೌಡರ್, ಸತೀಶ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.