ತುಂಬಿ ನಿಂತಿರುವ ರಾಜಕಾಲುವೆ-ನಗರಸಭೆ ಕ್ರಮ ಕೈಗೊಳ್ಳಲಿ

ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಕೋಟೆಕರೆ ಪಕ್ಕದಲ್ಲಿರುವ ರಾಜ ಕಾಲುವೆಯಲ್ಲಿರುವ ಕೊಳಚೆ ನೀರು ಹರಿದು ಹೋಗದೆ, ಕಾಲುವೆ ತುಂಬ ನಿಂತುಕೊಂಡಿರುವುದು ಸಾರ್ವಜನಿಕರಿಗೆ ತೊಂದರೆಯಾಗಿ ಪರಿಣಮಿಸಿದೆ.

ನಗರದ ವಿನಾಯಕ ಕಾಲೋನಿ, ದುಂಡಸಿನಗರ ಸೇರಿದಂತೆ ಹಲವು ಭಾಗಗಳ ಚರಂಡಿ ನೀರು ಇಲ್ಲಿಗೆ ಕಾಲುವೆ ಮೂಲಕ ಹರಿದು ಬರುತ್ತದೆ. ಆದರೆ ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನೀರು ಹರಿಯದೇ ನಿಂತುಕೊಂಡಿದ್ದು, ಅದರಲ್ಲಿ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್ ಗಳು ಸೇರಿದಂತೆ ಅನೇಕ ರೀತಿಯ ಕಸಗಳೂ ಸೇರಿಕೊಂಡಿದೆ. ಕೊಳಚೆ ನೀರು ಸಮರ್ಪಕವಾಗಿ ಹರಿಯದೇ ನಿಂತುಕೊಳ್ಳುವುದರಿಂದ ಅನೇಕ ರೋಗಗಳ ಹುಟ್ಟಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ನಗರಸಭೆಯು ಎಚ್ಚೆತ್ತೊಕೊಂಡು ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.