ಟಿಪ್ಪರ್-ಲಾರಿ ಮುಖಾಮುಖಿ ಡಿಕ್ಕಿ

ಶಿರಸಿ: ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ ಹಾರುಗಾರದ ಬಳಿ ಟಿಪ್ಪರ್ ಹಾಗು ಲಾರಿಗಳ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಶಿರಸಿಯಿಂದ ಭಟ್ಕಳಕ್ಕೆ ಚಲಿಸುತ್ತಿದ್ದ ಮೆಣಸು ತುಂಬಿದ ಲಾರಿಗೆ ಎದುರಿನಿಂದ ಬಂದ ಟಿಪ್ಪರ್ ಅಪ್ಪಳಿಸಿದ್ದರ ಪರಿಣಾಮ, ಟಿಪ್ಪರ್ ರಸ್ತೆಯಂಚಿನಲ್ಲಿರುವ ಧರೆಗೆ ಅಪ್ಪಳಿಸಿ ಬಿದ್ದಿದ್ದು, ಸ್ಥಳಕ್ಕೆ ಆಗಮಿಸಿದ ಪೋಲೀಸ್ ಹೈವೆ ಪ್ಯಾಟ್ರೋಲ್ ತಂಡವು ಟ್ರಾಫಿಕ್ ಜಾಮ್ ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.