ಏ.19 ರಿಂದ ಮಕ್ಕಳ ಯಕ್ಷಗಾನ ಶಿಬಿರ

ಶಿರಸಿ: ಕಳೆದ 12 ವರ್ಷಗಳಿಂದ ಬೇಸಿಗೆ ರಜೆಯಲ್ಲಿ ಮಕ್ಕಳ ಯಕ್ಷಗಾನ ಶಿಬಿರ ಸಂಘಟಿಸುತ್ತಿರುವ ಐನಬೈಲಿನ ಯಕ್ಷಾಂಕುರ ಸಂಘಟನೆಯು ಈ ಬಾರಿಯ ಯಕ್ಷಗಾನ ಶಿಬಿರವನ್ನು ಏ.19ರಿಂದ ಏ.29ರವರೆಗೆ ಕೆ.ಎಚ್.ಬಿ. ಕಾಲೊನಿಯ ಶಂಕರ ನಾಗರಕಟ್ಟೆ ಅವರ ಮನೆಯಲ್ಲಿ ಹಮ್ಮಿಕೊಂಡಿದೆ. ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಯಕ್ಷಗಾನ ಭಾಗವತ ಪರಮೇಶ್ವರ ಹೆಗಡೆ ಐನಬೈಲ್ ಶಿಬಿರದಲ್ಲಿ ಮಕ್ಕಳಿಗೆ ತರಬೇತಿ ನೀಡುವರು. 6ರಿಂದ 18 ವರ್ಷದ ಒಳಗಿನ ಮಕ್ಕಳು ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಪರಮೇಶ್ವರ ಹೆಗಡೆ (9480018915), ನಾಗೇಂದ್ರ ಭಟ್ಟ ಸಂಕದಗುಂಡಿ (9731977906), ಸುರೇಶ ಹೆಗಡೆ (9242919300) ಅವರನ್ನು ಸಂಪರ್ಕಿಸಬಹುದು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.