ಶಿರಸಿಯಲ್ಲಿ ಜಿನುಗಿದ ಮೊದಲ ಮಳೆ

ಶಿರಸಿ: ಈ ವರ್ಷದ ಮೊದಲ ಮಳೆ ಹನಿಯು ಸೋಮವಾರ ನಗರದ ಕೆಲವೆಡೆ ಧರೆಯನ್ನು ಮುತ್ತಿಕ್ಕಿತು. ಪ್ರತಿವರ್ಷ ತಾಲೂಕಿನ ಮಂಜುಗುಣಿಯ ರಥೋತ್ಸವಕ್ಕೆ ಮಳೆಹನಿ ಸೋಕುವುದೆಂದು ವಾಡಿಕೆಯಿದ್ದು, ರಥೋತ್ಸವದ ಮುನ್ನಾ ದಿನವೇ ಮಳೆಯು ತನ್ನ ಇರುವಿಕೆಯನ್ನು ತೋರಿಸಿದೆ.

ತಾಲೂಕಿನಲ್ಲಿ ಈಗಾಗಲೇ ನೀರಿನ ಅಭಾವ ಎದುರಾಗಿದ್ದು, ಒಂದು ಕಡೆ ಜನರು ಮಳೆಯನ್ನು ಎದುರು ನೋಡುತ್ತಿದ್ದರೆ, ಈ ಎಪ್ರಿಲ್ ತಿಂಗಳಲ್ಲಿ ಸಾಕಷ್ಟು ಮಂಗಲ ಕಾರ್ಯದ ಮುಹೂರ್ತಗಳು ನಿಗಧಿಯಾಗಿದ್ದು, ಮಳೆಯ ಈ ಮುನ್ಸೂಚನೆಯು ಮನೆಯ ಯಜಮಾನನಿಗೆ ಸ್ವಲ್ಪ ಹೆಚ್ಚಿನ ಕೆಲಸವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.