ಸುಣಗಾರರು ನ್ಯಾಯಾಂಗ ವ್ಯವಸ್ಥೆಯ ಬಹುದೊಡ್ಡ ಆಸ್ತಿ; ರಾಜು ಮೊಗವೀರ

ಶಿರಸಿ: ಶಿರಸಿಯ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿ ಎನ್ ಸುಣಗಾರ ಅವರಿಗೆ ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಒಗ್ಗೂಡಿ ಶುಕ್ರವಾರ ನಗರದ ಮಿನಿ ವಿಧಾನಸೌಧದಲ್ಲಿ ಶಾಲು ಹೊದೆಸಿ ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ನಿವೃತ್ತ ನ್ಯಾಯಾಧೀಶರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿಕೊಂಡು ಶುಭ ಹಾರೈಸಿದರು.
ಸಹಾಯಕ ಆಯುಕ್ತ ರಾಜು ಮೊಗವೀರ ಮಾತನಾಡಿ, ಸುಣಗಾರ ಅವರು ನ್ಯಾಯಾಧೀಶರಾಗಿದ್ದಾಗಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಸರಳತೆ ಮತ್ತು ಸ್ನೇಹಜೀವಿ ಯಾವುದೇ ವ್ಯಕ್ತಿ ಉನ್ನತ ಹುದ್ದೆಗೆ ತಲುಪಿದಾಗಲೂ ತನ್ನ ಮೂಲ ಸ್ವಭಾವನ್ನು ಬಿಟ್ಟುಕೊಡದಿದ್ದಾಗ ಅವನು ಜನರೊಡನೆ ಒಂದಾಗುತ್ತಾನೆ. ಇಂತಹ ವ್ಯಕ್ತಿಗಳಲ್ಲಿ ಸುಣಗಾರ್ ಅವರು ಒಬ್ಬರು ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಸಿ ಎನ್ ಸುಣಗಾರರು, ತಾವು ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಶಿರಸಿಯ ಜನತೆ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಅತ್ಯುತ್ತಮವಾಗಿ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ತುಂಬುಹೃದಯದ ನಮನ ಸಲ್ಲಿಸುವುದಾಗಿ ಹೇಳಿದರು.
ಈ ವೇಳೆ ಡಿಡಿಪಿಐ ಪ್ರಸನ್ನಕುಮಾರ, ನಗರಸಭೆ ಪೌರಾಯುಕ್ತ ಮಹೇಂದ್ರ ಕುಮಾರ್, ಶ್ರೀನಿವಾಸ ಹೆಬ್ಬಾರ್, ವಕೀಲರ ಸಂಘದ ಅಧ್ಯಕ್ಷ ಎ. ರವೀಂದ್ರ ನಾಯ್ಕ, ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ, ಪ್ರೊ. ಕೆ ಎಸ್ ಹೊಸ್ಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Categories: ಜಿಲ್ಲಾ ಸುದ್ದಿ

Leave A Reply

Your email address will not be published.