ಲಾರಿ ಮುಷ್ಕರಕ್ಕೆ ಶಿರಸಿ ಲಾರಿ ಮಾಲಕ ಮತ್ತು ಚಾಲಕರ ಸಂಘದ ಬೆಂಬಲ

ಶಿರಸಿ: ಕಳೆದ ಹಲವು ದಿನದಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮಾಲಕ ಮತ್ತು ಚಾಲಕರ ಮುಷ್ಕರ ನಡೆಯುತ್ತಿದ್ದು, ಅದಕ್ಕೆ ಬೆಂಬಲ ಸೂಚಿಸಿ ಶಿರಸಿ ತಾಲೂಕಾ ಲಾರಿ ಚಾಲಕ ಮತ್ತು ಮಾಲಕರ ವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಶಿರಸಿ ಲಾರಿ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ ಟಿ ರಾಜು ಹೇಳಿದರು.

ಅವರು ಇಂದು ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಕೋಟೆಕೆರೆ ಎದುರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷ 35-40% ಏರಿಕೆಯಾಗುತ್ತಿದೆ. ವಾಹನ ನೊಂದಣಿ, ಹೊಸ ಲೈಸೆನ್ಸ್ ಮಾಡಿಸುವ ಹಣ ಸೇರಿದಂತೆ ಎಲ್ಲವೂ ಏರಿಕೆಯಾಗುತ್ತಿದೆ. ನಾಳೆಯಿಂದ ಅಖಿಲ ಭಾರತೀಯ ಮಟ್ಟದಲ್ಲಿ ಮುಷ್ಕರ ನಡೆಸಲಾಗುವುದು ಎಂದರು‌.
ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಪ್ರಸ್ತುತ ವಿಮೆಯ ಥರ್ಡ್ ಪಾರ್ಟಿ ಇನ್ಸುರೆನ್ಸ್ ನ ಬೆಲೆಯನ್ನು ಹೆಚ್ಚಿಸಲಾಗಿದೆ. ಮತ್ತು ಟೋಲ್ ನಾಕಾ ರದ್ದು ಮಾಡಬೇಕು. ಮುಷ್ಕರ ಹೀಗೆಯೇ ಮುಂದುವರೆದರೆ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದರು.
ಲಾರಿ ಚಾಲಕರ ಸಂಘದ ಅಧ್ಯಕ್ಷ ಇಕ್ಬಾಲ್ ಬನವಾಸಿ ಮಾತನಾಡಿ, ಗಾಡಿ ಚಲಿಸಿದರೆ ಮಾತ್ರ ನಮಗೆ ದುಡಿಮೆಯಾಗಿದೆ. ಈಗ ಕುಟುಂಬಕ್ಕೆ ಯಾವುದೇ ದುಡಿಮೆ ಇಲ್ಲದಂತಾಗಿದೆ. ಲಾರಿ ಮುಷ್ಕರದಿಂದ ತಾಲೂಕಿನಲ್ಲಿ ₹ 2,00,000 ರೂಗಳಷ್ಟು ಒಂದು ದಿನಕ್ಕೆ ನಷ್ಟವಾಗುತ್ತಿದೆ. ಒಂದು ಸಾವಿರಕ್ಕೂ ಅಧಿಕ ಜನರ ಜೀವನದ ಮೇಲೆ ಮುಷ್ಕರ ಪರಿಣಾಮ ಬೀರುತ್ತಿದೆ ಎಂದರು.
ಈ ವೇಳೆ ಶ್ರೀನಿವಾಸ ನಾಯ್ಕ, ಶಿವರಾಂ ಶೆಟ್ಟರ್ ಸೇರಿದಂತೆ ಲಾರಿ ಮಾಲಕ ಹಾಗು ಚಾಲಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.