ಬದುಕು ಎದುರಿಸುವ ಕೌಶಲ್ಯ ಇಂದಿನ ಮಕ್ಕಳಲ್ಲಿ ಕಾಣೆಯಾಗುತ್ತಿದೆ; ಉಷಾ ಐನಕೈ

ಶಿರಸಿ: ಇಂದಿನ ಮಕ್ಕಳು ಮಾನವೀಯ ಸಂಬಂಧದಿಂದ ವಿಮುಖರಾಗುತ್ತಿದ್ದಾರೆ. ಅವರಲ್ಲಿ ಬದುಕು ಎದುರಿಸುವ ಕೌಶಲ್ಯ ಕಾಣೆಯಾಗುತ್ತಿದೆ ಎಂದು ರಂಗಕರ್ಮಿ ಉಷಾ ಐನಕೈ ಕಳವಳ ವ್ಯಕ್ತಪಡಿಸಿದರು. 

ಇಲ್ಲಿಯ ಆದರ್ಶ ವನಿತಾ ಸಮಾಜವು ಹತ್ತು ದಿನಗಳ ಕಾಲ ಏರ್ಪಡಿಸಿರುವ ಮಕ್ಕಳ ಬೇಸಿಗೆ ಶಿಬಿರ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ತುಂಬಾ ಬುದ್ದಿವಂತರು. ನಮಗೆ ಗೊತ್ತಾಗದ ಎಷ್ಟೋ ತಾಂತ್ರಿಕ ವಿಷಯಗಳನ್ನು ಸಲೀಸಾಗಿ ನಿರ್ವಹಿಸುತ್ತಾರೆ. ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್ ಜತೆಯಲ್ಲಿ ವಾಸ್ತವ ಜಗತ್ತಿನತ್ತ ತೆರೆದುಕೊಳ್ಳುವಂತೆ ಮಾಡಬೇಕಿದೆ. ಶೈಕ್ಷಣಿಕ ಅಭ್ಯಾಸದತ್ತಲೂ ಹೆಚ್ಚಿನ ಗಮನ ನೀಡುವಂತೆ ಕಾಳಜಿ ವಹಿಸಬೇಕು ಎಂದರು.
ಶಿಬಿರಾರ್ಥಿ ಮಕ್ಕಳೊಂದಿಗೆ ಪ್ರಮುಖರು ಟ್ರೇದಲ್ಲಿ ಬೀಜ ನೆಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಸಂತಿ ಹೆಗಡೆ ಮಾತನಾಡಿದರು. ಬರಹಗಾರ್ತಿ ಭಾಗೀರಥಿ ಹೆಗಡೆ ಸ್ವಾಗತಿಸಿದರು. ಶಾಂತಲಾ ಹೆಗಡೆ ನಿರೂಪಿಸಿದರು. ಸೀತಾ ಕೂರ್ಸೆ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.