ಆನೆಹೊಂಡದ ಪುನಶ್ಚೇತನ ಕಾರ್ಯಕ್ಕೆ ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಂಸೆ

ಶಿರಸಿ: ಸಾರ್ವಜನಿಕರೇ ಮುಂದಾಗಿ ಸರಕಾರದ ಯಾವುದೇ ಯೋಜನೆಯ ಅನುದಾನ ಬಳಸದೇ ನಗರದ ಝೂ ಸರ್ಕಲ್ ಬಳಿಯ ಆನೆಹೊಂಡದಲ್ಲಿ ನಡೆಯುತ್ತಿರುವ ಕೆರೆಯ ಪುನಶ್ಚೇತನ ಕಾರ್ಯವನ್ನು ವೀಕ್ಷಿಸಿದ ಉತ್ತರಕನ್ನಡ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ನಾಯಕ್ ಜೀವಜಲ ಕಾರ್ಯಪಡೆಯ ಕಾರ್ಯವನ್ನು ಶ್ಲಾಘಿಸಿದರು.

ಇಂದು ನಗರಕ್ಕೆ ಆಗಮಿಸಿದ್ದ ಅವರು, ಪುನಶ್ಚೇತನ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಸಹಾಯಕ ಆಯುಕ್ತ ರಾಜು ಮೊಗವೀರರೊಡನೆ ತೆರಳಿ, ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರರೊಡನೆ ಪ್ರಗತಿ ಕಾರ್ಯದ ಕುರಿತು ಸಮಾಲೋಚನೆ ನಡೆಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.